ಪತ್ರಕರ್ತೆ ಕೃಷ್ಣಿ ಶಿರೂರಗೆ 2025ನೇ ಸಾಲಿನ ಪ್ರೇಮ್‍ಜಿ ಅಚೀವರ್ಸ್ ಅವಾರ್ಡ್

ಶಿರಸಿ ಡಿ23: ಹುಬ್ಬಳ್ಳಿಯ ಪ್ರೇಮ್‍ಜಿ ಫೌಂಡೇಷನ್ ಹಾಗೂ ಪಿ ಆ್ಯಂಡ್ ಜಿ ಮೀಡಿಯಾ ಕಮ್ಯೂನಿಕೇಶನ್ ಸಂಯುಕ್ತಾಶ್ರಯದಲ್ಲಿ ಕೊಡಲ್ಪಡುವ 2025ನೇ ಸಾಲಿನ ಪ್ರೇಮ್‍ಜಿ ಅಚೀವರ್ಸ್ ಅವಾರ್ಡ್ ಮಾಧ್ಯಮ ರತ್ನ ಪ್ರಶಸ್ತಿಯನ್ನು ಶಿರಸಿ ಮೂಲದ ಪತ್ರಕರ್ತೆ ಕೃಷ್ಣಿ ಶಿರೂರ ಅವರಿಗೆ ಪ್ರದಾನ ಮಾಡಲಾಯಿತು.

ಹುಬ್ಬಳ್ಳಿಯ ನವೀನ್‌ ಹೋಟೆಲ್‌ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಚಿವ, ಉದ್ಯಮಿ ಮುರುಗೇಶ್ ನಿರಾಣಿ ಪ್ರದಾನ ಮಾಡಿದರು. ಗುರುರಾಜ ಹೂಗಾರ ಹಾಗೂ ಇತರ ಗಣ್ಯರು ಪಾಲ್ಗೊಂಡಿದ್ದರು.