ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಇಂದು ಸೆಷನ್ಸ್ ಕೋರ್ಟ್‌ನಲ್ಲಿ ಚಾರ್ಜ್ ಫ್ರೇಮ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಭಾಗಿಯಾಗಿರುವ 17 ಆರೋಪಿಗಳ ಖುದ್ದು ಹಾಜರಾತಿಗೆ ಕೋರ್ಟ್ ಸೂಚನೆ ನೀಡಿದೆ. ಕೋರ್ಟ್ ಆದೇಶದಂತೆ ದರ್ಶನ್, ಪವಿತ್ರಾ ಗೌಡ, ನಂದೀಶ್, ಕೇಶವಮೂರ್ತಿ, ಪವನ್, ರಾಘವೇಂದ್ರ, ಧನುಷ್, ಧನರಾಜು, ವಿನಯ್, ಪ್ರದೂಷ್ ಸೇರಿದಂತೆ ಎಲ್ಲಾ 17 ಆರೋಪಿಗಳನ್ನು ಜೈಲು ಅಧಿಕಾರಿಗಳು ಇಂದು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾರ್ಜ್ ಫ್ರೇಮ್ ಮಾಡುವ ಕುರಿತು ನ್ಯಾಯಾಧೀಶರು ಆರೋಪಿಗಳ ಗಮನಕ್ಕೆ ತರುವರು. ಪ್ರತಿಯೊಬ್ಬ ಆರೋಪಿಗೂ ಅವರ ಮೇಲೆ ಇರುವ ಆರೋಪಗಳನ್ನು ಓದಿ ಕೇಳಿಸಲಿದ್ದು, ಅದಕ್ಕೆ ಆರೋಪಿತರು ಒಪ್ಪಿಗೆಯನ್ನಾ ಅಥವಾ ವಿರೋಧವನ್ನಾ ವ್ಯಕ್ತಪಡಿಸುತ್ತಾರೋ ಎನ್ನುವುದರ ಆಧಾರದ ಮೇಲೆ ನ್ಯಾಯಾಧೀಶರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
