ನವೆಂಬರ್ 22ರೊಳಗೆ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದೆ; ಮತಗಟ್ಟೆಗಳಿಗೆ ಮೊಬೈಲ್‌ ತೆಗೆದುಕೊಂಡು ಹೋಗಲು ಅನುಮತಿ ಇದೆ : ಜ್ಞಾನೇಶ್ ಕುಮಾರ್

ಪಾಟ್ನಾ, ಅಕ್ಟೋಬರ್ 05 : ಬಿಹಾರ ವಿಧಾನಸಭಾ ಚುನಾವಣೆಯು ನವೆಂಬರ್ 22ಕ್ಕೂ ಮುನ್ನ ನಡೆಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ. ಬಿಹಾರದಲ್ಲಿ 243 ಸಾರ್ವತ್ರಿಕ ಕ್ಷೇತ್ರಗಳಿವೆ. ಬಿಹಾರದ ಎಲ್ಲಾ ಮತದಾರರು ತಮ್ಮ ಮತ ಚಲಾಯಿಸುವಂತೆ ಮತ್ತು ಛಠ್ ಪೂಜಾ ಹಬ್ಬವನ್ನು ಆಚರಿಸುವಂತೆಯೇ ಚುನಾವಣಾ ದಿನವನ್ನು ಆಚರಿಸುವಂತೆ ಸಿಇಸಿ ಕುಮಾರ್ ಒತ್ತಾಯಿಸಿದರು. ನಾವು ಜೂನ್ 24, 2025 ರಂದು SIR ಅನ್ನು ಪ್ರಾರಂಭಿಸಿದ್ದೇವೆ ಮತ್ತು ಅದನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿದ್ದೇವೆ.

ಜೂನ್ 24, 2025 ರಂದು ,ಮತದಾರರ ಪಟ್ಟಿ ಪರಿಷ್ಕರಣೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಅದನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿದ್ದೇವೆ. ಹಲವು ವರ್ಷಗಳ ನಂತರ ನಾವು ಬೂತ್ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಭತ್ಯೆಯನ್ನು ಹೆಚ್ಚಿಸಿದ್ದೇವೆ. ಈಗ, ಬಿಎಲ್​ಒಗಳು ಸಹ ಗುರುತಿನ ಚೀಟಿಗಳನ್ನು ಪಡೆಯುತ್ತಾರೆ. ಬಿಹಾರದಲ್ಲಿ ಒಟ್ಟು 90,000 ಬೂತ್‌ಗಳು ಇರಲಿವೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮಾತನಾಡಿ, ಈ ಬಾರಿ ಯಾವುದೇ ಬೂತ್‌ನಲ್ಲಿ 1,200 ಕ್ಕಿಂತ ಹೆಚ್ಚು ಮತದಾರರ ಹೆಸರು ಇರುವುದಿಲ್ಲ. ಇದು ಮತದಾನಕ್ಕೆ ಅನುಕೂಲವಾಗಲಿದೆ. 2025 ರ ಬಿಹಾರ ಚುನಾವಣೆಯಿಂದ ಪ್ರತಿ ಬೂತ್ ಅನ್ನು 100 ಪರ್ಸೆಂಟ್ ವೆಬ್‌ಕಾಸ್ಟ್ ಮಾಡಲಾಗುತ್ತದೆ. ಈ ಬಾರಿ, ಬಿಹಾರದಲ್ಲಿ ಮತಗಳನ್ನು ಹೊಸ ವ್ಯವಸ್ಥೆಯನ್ನು ಬಳಸಿಕೊಂಡು ಎಣಿಕೆ ಮಾಡಲಾಗುತ್ತದೆ.