ಪ್ರಖ್ಯಾತ ನಿರ್ದೇಶಕ ಆರ್‌ಜಿವಿ ಅವರು ರಿಷಬ್ ಶೆಟ್ಟಿ ಬಗ್ಗೆ ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ರಿಷಬ್ ಶೆಟ್ಟಿ, “ನಾನು ಕೇವಲ ಸಾಮಾನ್ಯ ಸಿನಿಮಾ ಪ್ರೇಮಿ” ಎಂದು ಹೇಳಿದ್ದಾರೆ. ರಿಷಬ್ ಉತ್ತರದ ಬಳಿಕ ಆರ್‌ಜಿವಿ ಮತ್ತೆ ಪ್ರತಿಕ್ರಿಯಿಸಿ, ಇತರ ನಿರ್ದೇಶಕರನ್ನು ತೆಗಳುತ್ತಾ ರಿಷಬ್ ಶೆಟ್ಟಿಗೆ ಇನ್ನಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಮ್ ಗೋಪಾಲ್ ವರ್ಮಾ ಯಾವುದೇ ರೀತಿಯ ಟ್ವೀಟ್ ಮಾಡಿದರೂ ಅದು ವಿಚಿತ್ರವಾಗಿರುತ್ತದೆ. ಇದು ಅವರು ಮೊದಲಿನಿಂದಲೂ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಈಗ ರಿಷಬ್ ಶೆಟ್ಟಿ ಅವರ ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ಆರ್‌ಜಿವಿ ವಿಶ್ ಮಾಡಿದ್ದಾರೆ. ಈ ಟ್ವೀಟ್ ಎಲ್ಲೆಡೆ ವೈರಲ್ ಆಗಿದೆ. ಅವರು ಈ ವೇಳೆ ಮಾಡಿದ ಪದ ಬಳಕೆ ಸಾಕಷ್ಟು ಚರ್ಚೆಗೆ ಕಾರಣ ಆಗಿದೆ.
ರಿಷಬ್ ಶೆಟ್ಟಿ ಅವರನ್ನು ಹೊಗಳಿ ಆರ್‌ಜಿವಿ ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ರಿಷಬ್ ಶೆಟ್ಟಿ, ‘ನಾನು ಓರ್ವ ಸಾಮಾನ್ಯ ಸಿನಿಮಾ ಲವರ್’ ಎಂದು ರಿಷಬ್ ಶೆಟ್ಟಿ ಉತ್ತರಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆರ್‌ಜಿವಿ ಅವರು ಬೇರೆ ನಿರ್ದೇಶಕರನ್ನು ತೆಗಳಿ ರಿಷಬ್ನ ಮತ್ತಷ್ಟು ಹೊಗಳಿದ್ದಾರೆ.
‘ನಿಜ ಹೇಳಬೇಕು ಎಂದರೆ ನೀವು ಸಿನಿಮಾ ಲವರ್ ಅಲ್ಲ. ನೀವು ಸಿನಿಮಾನ ಅದ್ಭುತವಾಗಿ ಮಾಡುವವರು. ನಿಮ್ಮ ಸಿನಿಮಾ ಮೇಕಿಂಗ್ನಿಂದ ಎಲ್ಲಾ ನಿರ್ದೇಶಕರನ್ನು ಬಗ್ಗು ಬಡಿದಿದ್ದೀರಿ. ಇದು ಹೊಸ ರೀತಿಯ ಸಿನಿಮಾ ಮೇಕಿಂಗ್. ಹೊಸ ರೀತಿಯ ಸಿನಿಮಾ ಮೇಕಿಂಗ್ ಹುಟ್ಟು ಹಾಕಿದ್ದೀರಿ’ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.
