ಅಪರಿಚಿತ ವಾಹನ ಹತ್ತಿದ ಪರಿಣಾಮ – ಕಾರಿನೊಳಗೆ 9ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ

ಒಡಿಶಾ, ಸೆಪ್ಟೆಂಬರ್ 08: “ನೀನು ಎಲ್ಲಿಗೆ ಹೋಗ್ಬೇಕು, ಅಲ್ಲಿಗೆ ಬಿಡ್ತೀನಿ” ಎಂದು ಹೇಳಿ 9ನೇ ತರಗತಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಕರೆದೊಯ್ದ ದುಷ್ಕರ್ಮಿಗಳು, ಕಾರಿನೊಳಗೇ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ ದರಿಂಗ್‌ಬಾಡಿ ಪ್ರದೇಶದಲ್ಲಿ ನಡೆದಿದೆ. ಪೊಲೀಸರು ತಿಳಿಸಿರುವ ಪ್ರಕಾರ, ಶುಕ್ರವಾರ ಸಂಜೆ ಬಾಲಕಿ ತನ್ನ ಅಕ್ಕನ ಮನೆಗೆ ತೆರಳಿ, ಬಳಿಕ ಗಣೇಶ ಪೂಜೆಯ ವಿಸರ್ಜನಾ ಮೆರವಣಿಗೆ ವೀಕ್ಷಿಸಲು ಮಾರುಕಟ್ಟೆಗೆ ಹೋಗಿ ಮನೆಗೆ ಮರಳುವಾಗ ಈ ಘಟನೆ ನಡೆದಿದೆ.

ಆಕೆ ಮನೆಗೆ ಮರಳುತ್ತಿದ್ದ ವೇಳೆ, ಅಪರಿಚಿತ ಕಾರೊಂದು ಪಕ್ಕದಲ್ಲಿ ನಿಂತಿತು. ಕಾರಿನಲ್ಲಿದ್ದ ವ್ಯಕ್ತಿ “ನೀನು ಎಲ್ಲಿಗೆ ಹೋಗಬೇಕು, ಅಲ್ಲಿಗೆ ಬಿಡ್ತೀನಿ” ಎಂದು ಹೇಳಿ ಬಾಲಕಿಯನ್ನು ಕರೆದೊಯ್ದು, ಬಳಿಕ ಕಾರಿನೊಳಗೇ ಅತ್ಯಾಚಾರ ಎಸಗಿದ್ದಾನೆ ಎಂದು ದರಿಂಗ್‌ಬಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ಬಾಲಕಿಯ ಹೇಳಿಕೆ ದಾಖಲಿಸಿಕೊಂಡಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿ ತನಿಖೆ ಆರಂಭಿಸಿದ್ದಾರೆ.

ಆರೋಪಿ ವಿವಾಹಿತನಾಗಿದ್ದು, ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಕಂಧಮಲ್ ಎಸ್ಪಿ ಹರೀಶ ಬಿ.ಸಿ. ಈ ವಿಷಯ ತನಿಖೆ ಹಂತದಲ್ಲಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಹೇಳಿದರು.

ಹೀಗೆ ಯಾವ ಹೆಣ್ಣುಮಕ್ಕಳು ಕೂಡ ಅಪರಿಚಿತ ವಾಹನ ಹತ್ತುವ ಮುನ್ನ ತುಂಬಾ ಎಚ್ಚರಿಕೆಯಿಂದಿರಬೇಕು, ಯಾರೋ ಲಿಫ್ಟ್​ ಕೊಡುತ್ತೇನೆ ಎಂದು ಹೇಳಿದರೆ ಒಪ್ಪಿ ಹತ್ತಬಾರದು.