ಚಾಣಕ್ಯನ ಮಾತು: ಯಶಸ್ಸಿಗೆ ದಾರಿ ತೋರಿಸುವ ಬೆಳಗಿನ ದಿನಚರಿ

ಪ್ರತಿ ವ್ಯಕ್ತಿಗೂ ಜೀವನದಲ್ಲಿ ಯಶಸ್ಸು ಸಾಧಿಸುವ ಆಸೆ ಇರುತ್ತದೆ. ಆದರೆ ಯಶಸ್ಸು ಪಡೆಯಲು, ಗುರಿ ತಲುಪಲು ಯಾವ ರೀತಿಯಲ್ಲಿ ಯೋಜನೆ ರೂಪಿಸಬೇಕು ಎಂಬುದನ್ನು ಅನೇಕರಿಗೆ ತಿಳಿದಿರುವುದಿಲ್ಲ. ಇಂತಹ ಸಂದರ್ಭದಲ್ಲೇ ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಯಶಸ್ಸು ಸಾಧಿಸಲು ಅನುಸರಿಸಬೇಕಾದ ಮಾರ್ಗವನ್ನು ವಿವರಿಸಿದ್ದಾರೆ. ನೀವು ಕೂಡ ಯಶಸ್ಸನ್ನು ಪಡೆಯಲು ಬಯಸಿದರೆ, ನಿಮ್ಮ ನಿತ್ಯದ ಬೆಳಗಿನ ದಿನಚರಿ ಹೀಗಿರಲಿ.

ದಿನದ  ಚೆನ್ನಾಗಿ ಪ್ರಾರಂಭವಾದರೆ, ನಾವು ಇಡೀ ದಿನ ಸಕಾರಾತ್ಮಕವಾಗಿರಬಹುದು, ಎಲ್ಲಾ ಕೆಲಸಗಳು ಸಹ ಪೂರ್ಣಗೊಳ್ಳುತ್ತದೆ. ಅದಕ್ಕಾಗಿಯೇ ಹಿರಿಯರು ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳಬೇಕು, ಬೆಳಗಿನ ಸಮಯ ಅತ್ಯಮೂಲ್ಯವಾದದ್ದು, ಅದನ್ನು ವ್ಯರ್ಥ ಮಾಡಬಾರದು ಎಂದು ಹೇಳುವುದು. ಅದರಲ್ಲೂ ಯಶಸ್ಸು ಸಾಧಿಸಬೇಕು, ಜೀವನದಲ್ಲಿ ಮುಂದೆ ಬರಬೇಕು, ಸಮಾಜದಲ್ಲಿ ಸ್ಥಾನಮಾನ ಸಿಗಬೇಕು ಎಂದು ಬಯಸುವವರು ಬೆಳಗಿನ ದಿನಚರಿಯಲ್ಲಿ ಈ ಒಂದಷ್ಟು ಸಲಹೆಗಳನ್ನು ಪಾಲಿಸಬೇಕು. ಇದನ್ನು ನಿತ್ಯ ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಯಶಸ್ಸು ಎನ್ನುವಂತಹದ್ದು ಲಭಿಸುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಿದ್ರೆ ಚಾಣಕ್ಯರು ಹೇಳಿರುವಂತೆ ಯಶಸ್ಸಿಗಾಗಿ ಬೆಳಗಿನ ದಿನಚರಿ ಹೇಗಿರಬೇಕು ಎಂಬುದನ್ನು ನೋಡೋಣ ಬನ್ನಿ.

ಯಶಸ್ಸು ಸಾಧಿಸಲು ಬೆಳಗಿನ ದಿನಚರಿ ಹೀಗಿರಲಿ:

ಬೆಳಗ್ಗೆ ಬೇಗ ಏಳುವುದು: ಬೆಳಿಗ್ಗೆ ಬೇಗನೆ ಏಳುವುದರಿಂದ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಲು ಸುಲಭವಾಗುತ್ತದೆ ಮತ್ತು ಬೇಗ ಏಳುವುದರಿಂದ ಜಡತ್ವ ಎನ್ನುವಂತಹದ್ದು ಕೂಡ ಇರುವುದಿಲ್ಲ. ನೀವು ದಿನವಿಡೀ ಉತ್ಪಾದಕತೆಯಿಂದ ಮತ್ತು ಸಕಾರಾತ್ಮಕವಾಗಿರಬಹುದು. ತಡವಾಗಿ ಮಲಗಿ, ತಡವಾಗಿ ಏಳುವುದು ಆರೋಗ್ಯ ಮತ್ತು ವೃತ್ತಿ ಎರಡಕ್ಕೂ ಹಾನಿಕಾರಕ. ಬೇಗ ಮಲಗುವುದು ಮತ್ತು ಬೇಗ ಏಳುವುದು ಯಶಸ್ಸಿನ ಮೊದಲ ಮೆಟ್ಟಿಲು ಎಂದು ಚಾಣಕ್ಯ ಹೇಳುತ್ತಾರೆ.

ಯೋಜನೆಗಳನ್ನು ರೂಪಿಸುವುದು: ಚಾಣಕ್ಯನ ಪ್ರಕಾರ, ಬೆಳಿಗ್ಗೆ ಎದ್ದ ನಂತರ, ನೀವು ನಿಮ್ಮ ದಿನವನ್ನು ಯೋಜಿಸಬೇಕು. ತನ್ನ ಇಡೀ ದಿನವನ್ನು ಯೋಜಿಸುವ ವ್ಯಕ್ತಿಯು ತನ್ನ ಗುರಿಗಳನ್ನು ಸಾಧಿಸುವಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ, ಅಲ್ಲದೆ ಈ ಯೋಜನೆಗಳನ್ನು ರೂಪಿಸುವುದರಿಂದ ಅಂದುಕೊಂಡ ಕೆಲಸವನ್ನು ಮುಗಿಸಲು ಸುಲಭವಾಗುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.

ಸಮಯ ನಿರ್ವಹಣೆ: ಸಮಯವು ತುಂಬಾ ಅಮೂಲ್ಯವಾದುದು, ಆದ್ದರಿಂದ ಅದನ್ನು ಬುದ್ಧಿವಂತಿಕೆಯಿಂದ ಬಳಸಬೇಕು ಎಂದು ಚಾಣಕ್ಯರು ಹೇಳುತ್ತಾರೆ. ನೀವು ಮೊದಲೇ ಸಿದ್ಧಪಡಿಸಿದ ಯೋಜನೆಯ ಪ್ರಕಾರ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು. ಯಾವುದೇ ಕೆಲಸವನ್ನು ನಾಳೆಗೆ ಮುಂದೂಡಬಾರದು. ಹೀಗೆ ಮಾಡುವುದರಿಂದ ಒಬ್ಬ ವ್ಯಕ್ತಿಯು ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ.

ಆರೋಗ್ಯದ ಬಗ್ಗೆ ಕಾಳಜಿ: ಆರೋಗ್ಯದ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ ಎಂದು ಚಾಣಕ್ಯ ಹೇಳುತ್ತಾರೆ, ಏಕೆಂದರೆ ಆರೋಗ್ಯದ ಬಗ್ಗೆ ಅಸಡ್ಡೆ ತೋರಿದಾಗ ರೋಗಗಳು ನಮ್ಮನ್ನು ಆವರಿಸುತ್ತದೆ. ಅನಾರೋಗ್ಯಕ್ಕೆ ತುತ್ತಾದರೆ ನಾನು ಅಂದುಕೊಂಡ ಗುರಿಗಳನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ದೇಹದಲ್ಲಿ ಶಕ್ತಿ, ಯುಕ್ತಿ ಇದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಹಾಗಾಗಿ ಪ್ರತಿನಿತ್ಯ ಯೋಗ, ವ್ಯಾಯಾಮ ಮಾಡಬೇಕು, ಆರೋಗ್ಯಕರ ಆಹಾರಗಳನ್ನು ಸೇವನೆ ಮಾಡಬೇಕು. ಈ ಎಲ್ಲಾ ಆರೋಗ್ಯಕರ ಅಭ್ಯಾಸಗಳು ಖಂಡಿತ ನಿಮಗೆ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತವೆ.