ಯಲ್ಲಾಪುರ: ಕೃಷಿ ಇಲಾಖೆ ಹಾಗೂ ತಾಲೂಕಿನ ಕರಡೊಳ್ಳಿಯ ಗೋವರ್ಧನ ಗೋಶಾಲೆಯ ಆಶ್ರಯದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಾವಯವ ಕೃಷಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಆ. 23 ರಂದು ಶಿರಸಿಯ ಯೋಗ ಮಂದಿರದಲ್ಲಿ, 24 ರಂದು ಕುಮಟಾದ ಡಿಎಟಿಸಿ ಸಭಾಭವನದಲ್ಲಿ ಹಾಗೂ 26 ರಂದು ಯಲ್ಲಾಪುರದ ನಾಯಕನಕೆರೆ ಶಾರದಾಂಬಾ ಸಭಾಭವನದಲ್ಲಿ ಸಾವಯವ ಸಿರಿ ಯೋಜನೆಯಯಡಿಲ್ಲಿ ಸಾವಯವ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ.
ಒಟ್ಟು 200 ಜನರಿಗೆ ತರಬೇತಿ ನೀಡಲಾಗುತ್ತಿದ್ದು, ಮೊದಲು ಬಂದವರಿಗೆ ಪ್ರಾಶಸ್ತ್ಯ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9481569241 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಗೋವರ್ಧನ ಟ್ರಸ್ಟಿ ಉಮಾಶಂಕರ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.