ಕಾನೂನು ಮುಂದೆ ಎಲ್ಲರೂ ಸಮಾನ – ಪ್ರಜ್ವಲ್ ಪ್ರಕರಣದ ಬೆನ್ನಲ್ಲೇ ನಿಖಿಲ್ ಪ್ರತಿಕ್ರಿಯೆ

ಚಿತ್ರದುರ್ಗ: ಕೋರ್ಟ್ ತೀರ್ಪಿಗೆ ಯಾರೇ ಆದರೂ ತಲೆ ಬಾಗಬೇಕಾಗುತ್ತದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಈ ವೇಳೆ, ಪ್ರಜ್ವಲ್ ರೇವಣ್ಣ ವಿರುದ್ಧ ಸೆಷನ್ ಕೋರ್ಟ್‍ನಲ್ಲಿ ಆದೇಶ ಪ್ರಕಟಗೊಂಡಿದೆ. ಕೋರ್ಟ್ ತೀರ್ಪಿನ ಬಗ್ಗೆ ಹೆಚ್ಚಿನ ವಿಶ್ಲೇಷಣೆಯ ಅಗತ್ಯವಿಲ್ಲ ಎಂದಿದ್ದಾರೆ.

ಪ್ರಜ್ವಲ್ ಮೇಲೆ ಆರೋಪ ಬಂದ ತಕ್ಷಣ ಪಕ್ಷದಿಂದ ಅಮಾನತು ಮಾಡಲಾಗಿತ್ತು. ನಮ್ಮ ಪಕ್ಷದ ವರಿಷ್ಠರು ಪಕ್ಷದಿಂದ ಅಮಾನತಿನಲ್ಲಿಟ್ಟಿದ್ದರು. ಆಗ ಅಪರಾಧಿನೋ, ಅಲ್ಲವೋ ಎಂಬ ತೀರ್ಪು ಬಂದಿರಲಿಲ್ಲ. ವರಿಷ್ಠರ ತೀರ್ಮಾನದ ಸ್ಪಷ್ಟತೆ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಿಂತ ಹೆಚ್ಚಾಗಿ ಈ ವಿಷಯದ ಬಗ್ಗೆ ನಾನು ಪ್ರಯಿಕ್ರಿಯಿಸಲ್ಲ ಎಂದಿದ್ದಾರೆ.