ಬೆಂಗಳೂರು, ಜುಲೈ 24: ಸಿಲಿಕಾನ್ ಸಿಟಿಯ ಆಕ್ಸಿಜನ್ ಹಬ್ನಂತಿರುವ ಕಬ್ಬನ್ ಪಾರ್ಕ್‌ನಲ್ಲಿ ಇನ್ಮುಂದೆ ಗೈಡ್ ಜೊತೆ ನೇಚರ್ ವಾಕ್ ಮಾಡುವ ಅವಕಾಶ ಸಿಗಲಿದೆ. ಕಬ್ಬನ್ ಪಾರ್ಕ್‌ನಲ್ಲಿ ಸುಮ್ಮ ಸುಮ್ಮನೆ ಸುತ್ತಾಡುವವರ ಜೊತೆಗೆ ಅಲ್ಲಿನ ಮರಗಳು, ಅವುಗಳ ವೈಶಿಷ್ಟ್ಯ ಹಾಗೂ ಕಬ್ಬನ್ ಪಾರ್ಕ್‌ನಲ್ಲಿ ಅಡಗಿರುವ ವಿಶೇಷತೆಗಳನ್ನ ಪರಿಚಯಿಸುವುದಕ್ಕೆ ತೋಟಗಾರಿಕೆ ಹೊಸ ಪ್ಲ್ಯಾನ್ ಮಾಡುತ್ತಿದ್ದು, ಇನ್ಮುಂದೆ ವೀಕೆಂಡ್ ನಲ್ಲಿ ಗೈಡ್ ಜೊತೆ ನೇಚರ್ ವಾಕ್ ಮಾಡುವ ಅವಕಾಶ ಸಿಗಲಿದೆ. ಬೆಂಗಳೂರಿನ ಹಸಿರುತಾಣ, ಬಗೆ ಬಗೆಯ ಸಸ್ಯ, ಮರಗಳ ತಾಣ ಕಬ್ಬನ್ ಪಾರ್ಕ್‌ನಲ್ಲಿ ಇದೇ ಜುಲೈ 27 ರಿಂದ ಹೊಸ ಕಾರ್ಯಕ್ರಮ ಆರಂಭಿಸುವುದಕ್ಕೆ ತೋಟಗಾರಿಕೆ ಇಲಾಖೆ ಸಜ್ಜಾಗಿದೆ. ಕಬ್ಬನ್ ಪಾರ್ಕ್ನ ವಿಶೇಷತೆಗಳನ್ನ ಪರಿಚಯಿಸುವುದಕ್ಕೆ ಕಬ್ಬನ್ ವಾಕ್ಸ್ ಹೆಸರಲ್ಲಿ ಗೈಡ್ ಜೊತೆಗೆ ನೇಚರ್ ವಾಕ್ ಮಾಡುವುದಕ್ಕೆ ಅವಕಾಶ ಕೊಡಲಾಗುತ್ತಿದ್ದು, ಇದಕ್ಕಾಗಿ 10 ಜನ ಪರಿಸರ ತಜ್ಞರ ತಂಡ ನೇಮಕ ಮಾಡಲಾಗಿದೆ.

ಒಟ್ಟಿನಲ್ಲಿ ಇಷ್ಟು ದಿನ ಪ್ರೇಮಿಗಳು, ವಾಕರ್ಸ್ ಅಡ್ಡವಾಗಿದ್ದ ಕಬ್ಬನ್ ಪಾರ್ಕ್‌ನಲ್ಲಿ, ಇನ್ಮುಂದೆ ಪರಿಸರದ ಪಾಠ ಹೇಳೋಕೆ ತೋಟಗಾರಿಕೆ ಇಲಾಖೆ ಸಜ್ಜಾಗಿದೆ. ಸದ್ಯ ಸಾವಿರಾರು ಮರಗಳು ಹಾಗೂ ವಿವಿಧ ಬಗೆಯ ಹೂಗಳನ್ನ ಹೊಂದಿರುವ ಕಬ್ಬನ್ ಪಾರ್ಕ್ಗೆ ಬರುವ ಪ್ರವಾಸಿಗರಿಗೆ ವೀಕೆಂಡ್ನಲ್ಲಿ ನೇಚರ್ ವಾಕ್ ಲಭ್ಯವಾಗ್ತಿದ್ದು, ಸದ್ಯ ತೋಟಗಾರಿಕೆ ಇಲಾಖೆಯ ಈ ಯೋಜನೆಗೆ ಪ್ರವಾಸಿಗರು ಹೇಗೆ ಪ್ರತಿಕ್ರಿಯಿಸುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.


