
ಮಂಗಳೂರು: ವಿಷಾನಿಲ ಸೋರಿಕೆಯಾಗಿ ಇಬ್ಬರು ಸಿಬ್ಬಂದಿ ಮೃತಪಟ್ಟಿರುವ ಘಟನೆ ಮಂಗಳೂರು ಹೊರವಲಯದ ಸೂರತ್ಕಲ್‌ನ ಎಂಆರ್‌ಪಿಎಲ್ ತೈಲ ಶುದ್ಧಿಕರಣ ಘಟಕದಲ್ಲಿ ನಡೆದಿದೆ. ದೀಪಚಂದ್ರ ಭಾರ್ತೀಯಾ, ಬಿಜಿಲ್ ಪ್ರಸಾದ್ ಮೃತರು ಎಂದು ತಿಳಿದುಬಂದಿದೆ.
ತೈಲ ಶುದ್ಧೀಕರಣ ಘಟಕದ ಮೂವ್ಮೆಂಟ್ ವಿಭಾಗದಲ್ಲಿ ಈ ಅವಘಡ ನಡೆದಿದೆ. ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಪರಿಶೀಲನೆಗೆ ತೆರಳಿದ್ದ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಎಂಆರ್‌ಪಿಎಲ್‌ನ ಒಎಂಎಸ್ (ಆಯಿಲ್ ಮೂಮೆಂಟ್ ಸರ್ವೀಸ್) ನಲ್ಲಿ ಘಟನೆ ನಡೆದಿದೆ. ಎಂಎಂಎಸ್ ವಿಭಾಗದ ಟ್ಯಾಂಕ್ ಮೇಲ್ಚಾವಣಿಗೆ ತೆರಳಿದ್ದಾಗ ಇಬ್ಬರು ಸಿಬ್ಬಂದಿ ಅಸ್ವಸ್ಥರಾಗಿದ್ದಾರೆ.
ತಕ್ಷಣ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಅಸ್ವಸ್ಥರ ರಕ್ಷಣೆಗೆ ಮುಂದಾಗಿದ್ದ ವಿನಾಯಕ ಮೈಗೇರಿ ಎನ್ನುವವರ ಸ್ಥಿತಿ ಕೂಡ ಗಂಭೀರವಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸದ್ಯ ವಿನಾಯಕಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ತನಿಖೆಗೆ ಎಂಆರ್‌ಪಿಎಲ್ ಆಡಳಿತ ಮಂಡಳಿ ಸಮಿತಿ ರಚನೆ ಮಾಡಿದೆ. ಗ್ರೂಪ್ ಜನರಲ್ ಮ್ಯಾನೇಜರ್ ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಲಾಗಿದೆ.
