ಅಕ್ರಮವಾಗಿ ಸಾಗಿಸುತ್ತಿದ್ದ 1930 ಕೆಜಿ ಗೋಮಾಂಸ ವಶ: ಆರೋಪಿ ಬಂಧನ

ಜೋಯಿಡಾ: ಕರ್ನಾಟಕದಿಂದ ಗೋವಾಗೆ ಸಾಗಾಟ ಮಾಡುತ್ತಿದ್ದ ವಾಹನ ಸಮೇತ ಆರೋಪಿಗಳನ್ನು ಬಂಧಿಸಿದ ಘಟನೆ ರಾಮನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಅನಮೋಡ ಘಟ್ಟದಲ್ಲಿ ರಸ್ತೆ ಕುಸಿತದಿಂದ ಸಂಚಾರ ಅಸ್ತವ್ಯಸ್ಥಗೊಂಡಿತ್ತು ರಾಮನಗರ ಶಿವಾಜಿ ವೃತ್ತದಲ್ಲಿ ಗೋವಾ ಕಡೆಗೆ ಹೋಗುವ ವಾಹನವನ್ನು ನಿಲ್ಲಿಸಿ ಬದಲಿ ಮಾರ್ಗ ಸೂಚಿಸುವ ಸಂಧರ್ಭದಲ್ಲಿ KA25 AB 6640 ವಾಹನವನ್ನು ನಿಲ್ಲುವಂತೆ ಸೂಚಿಸಲಾಗಿದೆ ಪೋಲೀಸರನ್ನು ನೋಡಿ ಹೆದರಿದ ಚಾಲಕ ವಾಹನ ನಿಲ್ಲಿಸದೇ ಗೋವಾ ಮಾರ್ಗವಾಗಿ ಪರಾರಿಯಾಗಲು ಯತ್ನಿಸಿದ್ದಾನೆ.ಈ ಸಮಯದಲ್ಲಿ ವಾಹನವನ್ನು ಹಿಂಬಾಲಿಸಿ ತಡೆಹಿಡಿದಾಗ ಗೋ ಮಾಂಸ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ವಾಹನದಲ್ಲಿ ಅಂದಾಜು 6 ಲಕ್ಷದ 75 ಸಾವಿರ ಮೌಲ್ಯದ 1930 ಕೆ.ಜಿ ಗೋ ಮಾಂಸ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ ರಾಜು ಬಾಳು ನಾಯಕ ಮತ್ತು ಸಿದ್ದಪ್ಪಾ ಬಾಳಪ್ಪ ಬದ್ದೂರ ಎನ್ನುವವರನ್ನು ಬಂದಿಸಲಾಗಿದ್ದು,ವಾಹನ ಮಾಲಿಕ ಬೆಳಗಾವಿ ಮೂಲದ ಮೋಹನದಾಸ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ರಾಮನಗರ ಪೋಲೀಸ್ ಠಾಣಾ ಸಬ್-ಇನ್ಸ್ಪೆಕ್ಟರ್ ಮಾಂತೇಶ ನಾಯಕ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.