ಯಲ್ಲಾಪುರ: ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸ್ಥಳೀಯ ಕಲಾವಿದರಿಂದ ಗುರುವಾರ ರಾತ್ರಿ ನಡೆದ ಸುದರ್ಶನ ಗರ್ವಭಂಗ ಯಕ್ಷಗಾನ ತಾಳಮದ್ದಲೆ ಪ್ರೇಕ್ಷಕರನ್ನು ರಂಜಿಸಿತು.
ಹಿಮ್ಮೇಳದಲ್ಲಿ ಭಾಗವತರಾಗಿ ವಿಘ್ನೇಶ್ವರ ಹೆಗಡೆ ಕುಂಟೆಮನೆ, ಮದ್ದಲೆವಾದಕರಾಗಿ ಕೃಷ್ಣ ಹೆಗಡೆ ಜೋಗದಮನೆ ಭಾಗವಹಿಸಿದ್ದರು.
ವಿಷ್ಣುವಾಗಿ ಡಾ.ಮಹೇಶ ಭಟ್ಟ ಇಡಗುಂದಿ, ಸುದರ್ಶನನಾಗಿ ಡಾ.ಶಿವರಾಮ ಭಾಗ್ವತ ಮಣ್ಕುಳಿ, ಶತ್ರುಪ್ರಸೂದನನಾಗಿ ರವೀಂದ್ರ ಭಟ್ಟ ವೈದಿಕರಮನೆ, ಲಕ್ಷ್ಮಿಯಾಗಿ ಶ್ರೀಧರ ಅಣಲಗಾರ, ಈಶ್ವರನಾಗಿ ತಿರುಮಲೇಶ್ವರ ಭಟ್ಟ ಬಾಲೀಗದ್ದೆ, ದೇವೇಂದ್ರನಾಗಿ ರಾಮಕೃಷ್ಣ ಭಟ್ಟ ಕಂಚನಗದ್ದೆ ಪಾತ್ರಚಿತ್ರಣ ನೀಡಿದರು.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಆರ್.ಭಟ್ಟ ಬಿದ್ರೆಪಾಲ, ಉಪಾಧ್ಯಕ್ಷ ಸುಹಾಸ ಭಾಗ್ವತ ಕಲಾವಿದರನ್ನು ಗೌರವಿಸಿದರು.