ಕಾರವಾರ ಕದ್ರಾ ಸಮೀಪದ ಬಾಳೆಮನಿ ಬಳಿ ಗುಡ್ಡ ಕುಸಿತ

ಕಾರವಾರ ತಾಲೂಕಿನ ಕದ್ರಾ ಸಮೀಪದ ಬಾಳೆಮನಿ ಬಳಿ ಗುಡ್ಡ ಕುಸಿತವಾಗಿದೆ. ಬೆಳಗಿನ ಜಾವ ಕೊಡಸಳ್ಳಿ ಅಣೆಕಟ್ಟಿಗೆ ಸಾಗುವ ರಸ್ತೆಯಲ್ಲಿ ಗುಡ್ಡ ಕುಸಿತವಾಗಿದೆ. ಕದ್ರಾದಿಂದ ಕೊಡಸಳ್ಳಿ ಹೋಗುವ ಮಾರ್ಗದ ಸಂಪರ್ಕ ಕಡಿತವಾಗಿದೆ. ಸ್ಥಳಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಜೆಸಿಬಿ ಮೂಲಕ ಮಣ್ಣು ತೆಗೆಯುವ ಕಾರ್ಯ ಪ್ರಾರಂಭವಾಗಿದೆ.

ಬಾಳೆಮನೆ, ಜೊಯಿಡಾ ತಾಲ್ಲೂಕಿನ ಸೂಳಗೇರಿ ಗ್ರಾಮದ ಜನರಿಗೆ ಇದೊಂದೇ ರಸ್ತೆ ಸಂಪರ್ಕಕ್ಕೆ ಆಸರೆಯಾಗಿದೆ. ಕೊಡಸಳ್ಳಿ ಅಣೆಕಟ್ಟೆ ನಿರ್ವಹಣೆ ಕೆಲಸಕ್ಕೆ ಕರ್ನಾಟಕ ವಿದ್ಯುತ್ ನಿಗಮದ ಸಿಬ್ಬಂದಿ ತೆರಳಲೂ ಇದೊಂದೇ ಮಾರ್ಗವಿದ್ದು, ಸದ್ಯ ಅಲ್ಲಿ ವಾಹನ ಸಂಚಾರ ಸಾಧ್ಯವಿಲ್ಲದ ಸ್ಥಿತಿ ಇದೆ. ಎಂದು ಕೆಪಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.