ಚಿಕಿತ್ಸೆ ಕೊಡುವ ವೈದ್ಯರೇ ಹೃದಯಾಘಾತಕ್ಕೆ ಬಲಿ; ಸರ್ಕಾರಿ ವೈದ್ಯ ಡಾ.ಸಂದೀಪ್ ನಿಧನ

ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುತ್ತಿದ್ದ ವೈದ್ಯರೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಸರ್ಕಾರಿ ವೈದ್ಯ ಡಾ.ಎನ್.ಸಂದೀಪ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಬೆಚ್ಚಿ ಬೀಳಿಸುತ್ತಿದೆ. ಈ ಬೆನ್ನಲ್ಲೇ ಶಿವಮೊಗ್ಗದಲ್ಲೂ ಹೃದಯಾಘಾತಕ್ಕೆ ಬಲಿಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸರ್ಕಾರಿ ವೈದ್ಯರು ಸಾವನಪ್ಪಿದ್ದಾರೆ.  ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಸರ್ಕಾರಿ ವೈದ್ಯ ಡಾ. ಎನ್. ಸಂದೀಪ್ (48) ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 

ಸರ್ಕಾರಿ ವೈದ್ಯ ಡಾ. ಎನ್. ಸಂದೀಪ್ ಜುಲೈ 30, 2025 ರಂದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಈ ಘಟನೆಯು ಆರೋಗ್ಯ ಕೇಂದ್ರದ ಸಿಬ್ಬಂದಿ, ಸ್ಥಳೀಯ ಜನರ ಜೊತೆಗೆ ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಆಘಾತ ಮತ್ತು ಶೋಕದ ಛಾಯೆಯನ್ನು ಮೂಡಿಸಿದೆ.

ಸರ್ಕಾರಿ ವೈದ್ಯ ಡಾ. ಸಂದೀಪ್ ನಿಧನ!

ಹೃದಯಾಘಾತದಿಂದ ಸಾವನಪ್ಪಿರುವ ಸರ್ಕಾರಿ ವೈದ್ಯ ಡಾ. ಸಂದೀಪ್ ಅವರು ತಮ್ಮ ಸೇವೆಯ ಮೂಲಕ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು. ಇದೀಗ ಅವರ ಅಕಾಲಿಕ ನಿಧನವು ಯುವ ಮತ್ತು ಮಧ್ಯವಯಸ್ಕರಲ್ಲಿ ಹೃದಯಾಘಾತದಿಂದ ಸಾವಿನ ಆತಂಕಕಾರಿ ಏರಿಕೆಯನ್ನು ಮತ್ತಷ್ಟು ಎತ್ತಿ ತೋರಿಸಿದೆ. ಹೀಗೆ ದಿನೇ ದಿನೇ ಹೃದಯಾಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತಷ್ಟು ಕಳವಳವನ್ನುಂಟು ಮಾಡಿದೆ.