
ಬ್ರಹ್ಮಾವರ: ಕುಂಜಾಲಿನಲ್ಲಿ ಗೋವಿನ ರುಂಡ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು 6 ಮಂದಿ ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ರಾಮ ಕುಂಜಾಲು (49) ಪ್ರಸಾದ್ (21) ನವೀನ್ ಮಟಪಾಡಿ(35) ಕೇಶವ ನಾಯ್ ಅಡ್ಡಿಲ್ (50), (35) ರಾಜೇಶ್ ಕುಂಜಾಲು (28) ಬಂಧಿಸಲಾಗಿದ್ದು 7ನೇ ಆರೋಪಿ ತಲೆಮರೆಸಿಕೊಂಡಿದ್ದಾನೆ. PO ಜೂ 28 ರಂದು ಆರೂರು ಗ್ರಾಮದ ಕುಂಜಾಲು ಜಂಕ್ಷನ್ ಶುಳಿ ರಾತ್ರಿ ಸುಮಾರು ಗುತ್ತಾ ವೇಳೆಗೆ ರಿಕ್ಷಾ ನಿಲ್ದಾಣದ ಎದುರು ಮುಖ್ಯ ರಸ್ತೆಯ ಮಧ್ಯ ಗೋವಿನ ತಲೆ ಮತ್ತು ಚರ್ಮದ ಭಾಗ ಕಂಡು ಬಂದಿತ್ತು. ಗೋವುವನ್ನು ಕಳ್ಳತನ ಮಾಡಿ ಅದನ್ನು ಕಸಾಯಿ ಮಾಡಿ, ಅದರ ಅವಶೇಷಗಳನ್ನು ಸಾರ್ವಜನಿಕ ಸ್ಥಳದಲ್ಲಿ ತಂದು ಬಿಸಾಕಿರುವ ಬಗ್ಗೆ ತಿಳಿದುಬಂದಿತ್ತು.
ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಒಟ್ಟು 4 ತಂಡಗಳನ್ನು ರಚಿಸಿ, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಕೂಲಂಕಷವಾಗಿ ಪರಿಶೀಲಿಸಿ, ಸಿಸಿಟಿವಿ ಹಾಗೂ ವಾಹನಗಳ ಚಲನೆಯ ಆಧಾರದ ಮೇಲೆ ತನಿಖೆ ನಡೆಸಿ, ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
