ಟಾಲಿವುಡ್‌ನಿಂದ ಧಮಾಕೇದಾರ್ ಸುದ್ದಿಯೊಂದು ಬಂದಿದೆ. ಅದುವೇ ಅಲ್ಲು ಅರ್ಜುನ್ ಹಾಗೂ ಪ್ರಶಾಂತ್ ನೀಲ್ಸೂ ಪರ್ ಕಾಂಬೋ ಸುದ್ದಿ.

ಹೌದು. ಅಲ್ಲು ಅರ್ಜುನ್ ಮುಂದಿನ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಾರೆ ಎನ್ನಲಾದ ಸುದ್ದಿ ವೈರಲ್ ಆಗಿದೆ. ಪ್ರಸ್ತುತ ಪ್ರಶಾಂತ್ ನೀಲ್ ಜೂ.ಎನ್‌ಟಿ ಆಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಅಲ್ಲು ಅರ್ಜುನ್ ಅಟ್ಲಿ ಚಿತ್ರಕ್ಕೆ ಡೇಟ್ಸ್ ಕೊಟ್ಟಿದ್ದಾರೆ. ಇಬ್ಬರ ವಿಭಿನ್ನ ಚಿತ್ರಗಳು ಮುಗಿದ ಬಳಿಕ ಪ್ರಶಾಂತ್ ನೀಲ್ ಜೊತೆಗೆ ಕೈಜೋಡಿಸಲಿದ್ದಾರೆ ಎನ್ನಲಾಗುತ್ತಿದ್ದು ಈ ಚಿತ್ರಕ್ಕೆ `ರಾವಣಂ’ ಎಂಬ ಶೀರ್ಷಿಕೆ ಇಡಲಾಗುತ್ತೆ ಅನ್ನೋದು ಇಂಟ್ರೆಸ್ಟಿಂಗ್ ವಿಚಾರ.

ಕೆಜಿಎಫ್ ಚಿತ್ರದ ಮೂಲಕ ಸ್ಟಾರ್ ಡೈರೆಕ್ಟರ್ ಆಗಿರುವ ಪ್ರಶಾಂತ್ ನೀಲ್ ಹಾಗೂ ಪುಷ್ಪ-2 ಮೂಲಕ ಇಂಟರ್‌ನ್ಯಾಶನಲ್ ಸ್ಟಾರ್ ಆಗಿರುವ ಅಲ್ಲು ಅರ್ಜುನ್ ಬಿಗ್ ಬಜೆಟ್ ಸಿನಿಮಾ ಮೇಕರ್ಸ್ ಎಂದು ಹೆಸರು ಮಾಡಿದವರು. ಇಬ್ಬರು ಒಂದೇ ಚಿತ್ರಕ್ಕಾಗಿ ಕೈಜೋಡಿಸದ್ರೆ ಆ ಸಿನಿಮಾ ಇನ್ನಿಲ್ಲದ ನಿರೀಕ್ಷೆ ಹುಟ್ಟಿಸೋದ್ರಲ್ಲಿ ಅನುಮಾನವೇ ಇಲ್ಲ. ಅಂದಹಾಗೆ ಈ ಸಿನಿಮಾವನ್ನ ಬಿಗ್ ಬಜೆಟ್‌ನಲ್ಲಿ ಟಾಲಿವುಡ್ ಖ್ಯಾತ ನಿರ್ಮಾಪಕ ದಿಲ್‌ರಾಜು ನಿರ್ಮಿಸಲಿದ್ದಾರೆ. ಸಿನಿಮಾ ಶುರುವಾಗೋದು ಇನ್ನೂ ಎರಡು ವರ್ಷದ ಬಳಿಕ ಎನ್ನಲಾಗುತ್ತಿದೆ.
ಸಿನಿಮಾ ಆರಂಭಕ್ಕೂ ಮುನ್ನವೇ ಅಲ್ಲು ನೀಲ್ ಕಾಂಬಿನೇಶನ್ ಚಿತ್ರದ ಶೀರ್ಷಿಕೆ ರಿವೀಲ್ ಆಗಿರುವುದು ವಿಶೇಷ. ಸಾಮಾನ್ಯವಾಗಿ ಬಿಗ್‌ಸ್ಟಾರ್‌ಗಳ ಚಿತ್ರಕ್ಕೆ ಆರಂಭದಲ್ಲೇ ಟೈಟಲ್ ರಿವೀಲ್ ಮಾಡೋದಿಲ್ಲ. ಕಾನ್ಸೆಪ್ಟ್ ಪ್ರಕಾರ ಮಾಡಲಾಗುತ್ತೆ. ಹೀಗಾಗಿ ಶೀರ್ಷಿಕೆ ವಿಚಾರಕ್ಕೆ ಗೊಂದಲ ಇದೆ. ಹಿಂದೆ ಸಂದರ್ಶನವೊಂದರಲ್ಲಿ ಪ್ರಶಾಂತ್ ನೀಲ್ ತಾವು ಚಿತ್ರ ಮಾಡಬೇಕೆನ್ನುವ ಹೀರೋ ಜೊತೆ ಲವ್ ಆದ್ರೆ ಮಾತ್ರ ಅವರ ಜೊತೆ ಸಿನಿಮಾ ಮಾಡ್ತೀನಿ ಎಂದಿದ್ರು.
ಹೀಗಾಗಿ ನಿರ್ದೇಶಕ ನೀಲ್ ಆಯ್ಕೆ ಮಾಡಿಕೊಳ್ಳುವ ಹೀರೋ ಇಂಟ್ರೆಸ್ಟಿಂಗ್ ಆಗಿರ್ತಾರೆ. ಇದೀಗ ಅಲ್ಲು ಜೊತೆ ಪ್ರಶಾಂತ್ ನೀಲ್ ಕೈ ಜೋಡಿಸಿರುವುದು ಆರಂಭಿಕ ಮಾತುಕತೆಯಲ್ಲಿ ರಿವೀಲ್ ಆಗಿದೆ.
