ಜಿಲ್ಲಾಮಟ್ಟದ ‘ಮುದ್ದುಕೃಷ್ಣ’ ವೇಷ ಫೋಟೋ ಸ್ಪರ್ಧೆಯ ಫಲಿತಾಂಶ ಪ್ರಕಟ

ಯಲ್ಲಾಪುರ: ಸುಜ್ಞಾನ ನೆಟ್‌ವರ್ಕ್ ಯಲ್ಲಾಪುರ ಅವರ ಇ-ಯಲ್ಲಾಪುರ ಡಿಜಿಟಲ್ ಮಾಧ್ಯಮದ ವತಿಯಿಂದ ರಂಗಸಹ್ಯಾದ್ರಿ ಹಾಗೂ ಗೌತಮ್ ಜುವೆಲರ್ಸ್ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ‘ಮುದ್ದುಕೃಷ್ಣ’ ವೇಷ ಫೋಟೋ ಸ್ಪರ್ಧೆಯ ಫಲಿತಾಂಶವನ್ನು ಗುರುವಾರ ಪ್ರಕಟಿಸಲಾಗಿದೆ.

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ತಾಲೂಕಿನ ಪುರಾಣ ಪ್ರಸಿದ್ಧ ಅಣಲಗಾರ ಶ್ರೀಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಸ್ಪರ್ಧೆಯ ಫಲಿತಾಂಶವನ್ನು ಬಿಡುಗಡೆಗೊಳಿಸಲಾಯಿತು. ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಆರ್.ಭಟ್ ಬಿದ್ರೇಪಾಲ್, ದೇವಾಲಯದ ಮೊಕ್ತೇಸರರಾದ ಗೋಪಾಲಕೃಷ್ಣ ಭಟ್ ವೈದಿಕರಮನೆ, ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ, ದೇವಸ್ಥಾನದ ಕಾರ್ಯದರ್ಶಿ ಮಹಾಬಲೇಶ್ವರ ಭಾಗ್ವತ್ ಗುಡ್ನಮನೆ, ಸುಜ್ಞಾನ ನೆಟ್ವರ್ಕ್ ನ ಜ್ಯೋತಿರಾದಿತ್ಯ ಭಟ್ ಫಲಿತಾಂಶವನ್ನು ಪ್ರಕಟಿಸಿದರು.

ಆಯುಷ್ ಪ್ರಶಾಂತ ಹೆಗಡೆ ಸಿದ್ಧಾಪುರ ಪ್ರಥಮ, ಸ್ತುತಿ ಅಕ್ಷಯ ಭಟ್ ಶಿರಸಿ ದ್ವಿತೀಯ ಹಾಗೂ ಹನೀಶ್ ಗೌಡ ಗುಳ್ಳಾಪುರ ತೃತೀಯ ಸ್ಥಾನ ಪಡೆದಿದ್ದಾರೆ. ಜತೀನ್ ಗೌಡ ಕಾರವಾರ, ಭುವನ್ಯಾ ಹೆಗಡೆ ಶಿರಸಿ, ತೇಜಸ್ ನಾಯ್ಕ ಯಲ್ಲಾಪುರ, ರಿಶಾ ಡಿಕೋಸ್ಟಾ ಶಿರಸಿ, ರಿಶಿ ದೇಸಾಯಿ ಜೊಯಿಡಾ, ಚತುರ್ವಿ ಕೃಷ್ಣ ಭಟ್ ಶಿರಸಿ, ಅನ್ವಿ ಮಂಜುನಾಥ ಭಟ್ ಯಲ್ಲಾಪುರ, ಸುವಿನ್ ಹೆಗಡೆ ಬಿಸ್ಲಕೊಪ್ಪ, ಆರಾಧ್ಯಾ ಭೋವಿವಡ್ಡರ್ ಯಲ್ಲಾಪುರ, ಆಶಿಷ್ ಹೆಗಡೆ ಯಲ್ಲಾಪುರ ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ‌.

ನಿರ್ಣಾಯಕರಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್, ಭಾರತೀ ನೃತ್ಯ ಕಲಾಕೇಂದ್ರದ ಮುಖ್ಯಸ್ಥೆ ಸುಮಾ ಹೆಗಡೆ ತೊಂಡೆಕೆರೆ, ಪತ್ತಾರ್ ಫೋಟೋ ಸ್ಟುಡಿಯೊದ ಗಣೇಶ ಪತ್ತಾರ್ ಕಾರ್ಯನಿರ್ವಹಿಸಿದರು. ವಿಜೇತರಾದ ಮಕ್ಕಳಿಗೆ ಸದ್ಯದಲ್ಲಿಯೇ ನಗದು ಬಹುಮಾನ, ಪಾರಿತೋಷಕ, ಪ್ರಮಾಣ ಪತ್ರವನ್ನು ವಿತರಿಸಿ, ಗೌರವಿಸಲಾಗುವುದು ಎಂದು ಸುಜ್ಞಾನ ನೆಟ್ವರ್ಕ್ ನ ಜ್ಯೋತಿರಾದಿತ್ಯ ಭಟ್ ತಿಳಿಸಿದ್ದಾರೆ.