ಮಂಡ್ಯ: ಜೂನ್ ತಿಂಗಳಲ್ಲೇ ಕೆಆರ್‌ಎಸ್ ಡ್ಯಾಂನಲ್ಲಿ 118.60 ಅಡಿ ನೀರು ಭರ್ತಿ ಆಗಿದ್ದು, ಇದೀಗ ಹಳೇ ಮೈಸೂರು ಭಾಗದ ಜೀವನಾಡಿ ಹೊಸ ದಾಖಲೆ ಬರೆದಿದೆ.

ಜೂನ್ ತಿಂಗಳಲ್ಲೇ ಅಣೆಕಟ್ಟು ಸಂಪೂರ್ಣ ಭರ್ತಿಯತ್ತ ಸಾಗುತ್ತಿದ್ದು, ಈಗಾಗಲೇ ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಡ್ಯಾಂ 118.60 ಅಡಿ ತುಂಬಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್‌ನಲ್ಲಿ ಇಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ.
ಜಲಾಶಯದ ನಿರ್ಮಾಣವಾದಾಗಿನಿಂದ ಮೊದಲ ಬಾರಿಗೆ ಜೂನ್‌ನಲ್ಲಿ ಇಷ್ಟೊಂದು ನೀರು ಸಂಗ್ರಹವಾಗುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಜುಲೈ ಅಂತ್ಯ ಅಥವಾ ಆಗಸ್ಟ್ನಲ್ಲಿ ಡ್ಯಾಂ ಭರ್ತಿಯಾಗುತ್ತಿತ್ತು. ಆದರೆ ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾದ ಹಿನ್ನೆಲೆ ಕೆಆರ್‌ಎಸ್ ಡ್ಯಾಂ 118.60 ಅಡಿ ಭರ್ತಿಯಾಗಿದೆ.
124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕನ್ನಂಬಾಡಿಯ ಸಂಪೂರ್ಣ ಭರ್ತಿಗೆ ಕೇವಲ 6 ಅಡಿ ಮಾತ್ರ ಬಾಕಿಯಿದೆ. ಸದ್ಯ ಡ್ಯಾಂನಲ್ಲಿ 18,387 ಕ್ಯುಸೆಕ್ ಒಳಹರಿವಿದೆ. ಇದೇ ರೀತಿ ಒಳಹರಿವು ಬಂದ್ರೆ ಒಂದು ವಾರದಲ್ಲೇ ಡ್ಯಾಂ ಭರ್ತಿಯಾಗಲಿದ್ದು, ಡ್ಯಾಂಗೆ 8 ಟಿಎಂಸಿ ನೀರು ಹರಿದು ಬಂದರೆ ಸಂಪೂರ್ಣ ಭರ್ತಿಯಾಗಲಿದೆ. ಕೆಆರ್‌ಎಸ್ ಡ್ಯಾಂ 49.452 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ.
