ಕೊಂಕಣಿ ಅಕಾಡೆಮಿ ಸದಸ್ಯರಾದ ಚಿದಾನಂದ ದೇಶಭಂಡಾರಿ ಸದಸ್ಯತ್ವ ಹಿಂಪಡೆದಿರುವುದು ಸರಿಯಲ್ಲ: ತಾಲೂಕು ಭಂಡಾರಿ ಸಮಾಜದಿಂದ ಖಂಡನೆ

ಯಲ್ಲಾಪುರ: ಕೊಂಕಣಿ ಅಕಾಡೆಮಿ ಸದಸ್ಯರಾದ ಚಿದಾನಂದ ದೇಶಭಂಡಾರಿ, ಕುಮಟಾ ಹಾಗೂ ನಾರಾಯಣ ಖಾರ್ವಿ, ಕುಂದಾಪುರ ಇವರನ್ನು ಏಕಾಏಕಿ ಕೈಬಿಟ್ಟಿರುವ ಸರ್ಕಾರದ ನಿರ್ಧಾರವನ್ನು ತಾಲೂಕು ಭಂಡಾರಿ ಸಮಾಜದ ಅಧ್ಯಕ್ಷ ಪ್ರೇಮಾನಂದ ನಾಯ್ಕ ಖಂಡಿಸಿದ್ದಾರೆ.

ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿ, ಹಿಂದುಳಿದ ಸಮಾಜವನ್ನು ಕೇವಲ ರಾಜಕೀಯ ಕಾರಣಕ್ಕಾಗಿ ಬಳಸಿಕೊಂಡು ಅಕಾಡೆಮಿಯ ಸದಸ್ಯತ್ವವನ್ನು ಒಮ್ಮೆಲೆ ಹಿಂತೆಗೆದುಕೊಂಡಿರುವುದು ಸರಿಯಾದ ಕ್ರಮವಲ್ಲ. ಚಿದಾನಂದ ದೇಶಭಂಡಾರಿ ಆರ್.ಎಸ್.ಎಸ್, ಹಿಂದು ಸಂಘಟನೆ ಹಾಗೂ ಆಡಳಿತ ಪಕ್ಷದಲ್ಲಿ ಸಕ್ರಿಯವಾಗಿದ್ದಾರೆ. ಅಲ್ಲದೇ ಸಮಾಜದ ಹಿರಿಯ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಇವರನ್ನು ಮತ್ತೆ ಸದಸ್ಯರಾಗಿ ಮುಂದುವರಿಸಬೇಕೆಂದು ಒತ್ತಾಯಿಸಿದ್ದಾರೆ.