ಮಂಗ್ಲಿ ಬರ್ತ್‍ಡೇ ಪಾರ್ಟಿ ಮೇಲೆ ದಾಳಿ – ಮಾದಕ ವಸ್ತು ಪತ್ತೆ, ಪೊಲೀಸರಿಗೆ ಆವಾಜ್ ಹಾಕಿದ ಗಾಯಕಿ!

ಖ್ಯಾತ ಗಾಯಕಿ ಮಂಗ್ಲಿ  ಬರ್ತ್​ಡೇ ಪಾರ್ಟಿ ಮೇಲೆ ಪೊಲೀಸರು ದಾಳಿ ಮಾಡಿ ಶಾಕ್ ನೀಡಿದ್ದಾರೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ತಾಲೂಕಿನ ಎರ್ಲಪಲ್ಲಿಯಲ್ಲಿನ ರೆಸಾರ್ಟ್​​ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ಗಾಂಜಾ, ವಿದೇಶಿ ಮದ್ಯ ಪತ್ತೆ ಆಗಿದೆ. ಪಾರ್ಟಿಯಲ್ಲಿ ಭಾಗಿಯಾಗಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ಪರೀಕ್ಷೆ ವೇಳೆ ಹಲವರು ಮಾದಕ ದ್ರವ್ಯ ಸೇವಿಸಿರೋದು ಪತ್ತೆ ಆಗಿದೆ. ಪಾರ್ಟಿ ವೇಳೆ ಮಂಗ್ಲಿ ಪೊಲೀಸರಿಗೆ ಆವಾಜ್ ಹಾಕಿದ್ದಾರೆ.  ‘ವಿಡಿಯೋ ಚಿತ್ರೀಕರಣ ಮಾಡದಂತೆ’ ಪೊಲೀಸರಿಗೆ ಮಂಗ್ಲಿ ಆವಾಜ್ ಹಾಕಿದ್ದಾರೆ. ಹೀಗಾಗಿ, ಅವರ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಕೇಳಿಬಂದಿದೆ.