ಗಾಂಜಾ ಸೇವನೆ :ಇಬ್ಬರ ಬಂಧನ

ಗಾಂಜಾ ಮಾದಕ ವಸ್ತು ಸೇವಿಸಿದ ಬಗ್ಗೆ ವೈಧ್ಯಕೀಯ ಪರೀಕ್ಷೆ ದೃಢಪಟ್ಟ ಹಿನ್ನಲೆಯಲ್ಲಿ ಶಿರಸಿ ನಗರ ಪೊಲೀಸರು ಶಿರಸಿ ಕಸ್ತೂರ ಬಾ ನಗರದ ನಿಯಾಜ್ ದಾವುದ್ ಉಮರ್ ಮತ್ತು ಅರೆಕೊಪ್ಪದ ಬಾಲಚಂದ್ರ ಗುರುಮೂರ್ತಿ ಮಡಿವಾಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಇರ್ವರು ಶಿರಸಿ ನಗರದ ಲಿಂಗದಕೋಣ ರಸ್ತೆ ಮೀನು ಮಾರುಕಟ್ಟೆ ಹಿಂಬಾಗದಲ್ಲಿ ಗಾಂಜಾ ಅಮಲು ಪದಾರ್ಥ ಸೇವನೆ ಮಾಡಿರುವ ಸಂಶಯದ ಮೇಲೆ ವಶಕ್ಕೆ ಪಡೆದು ನಗರದ ಪಂಡೀತ ಸಾರ್ವಜನಿ‌ಕ ಆಸ್ಪತ್ರೆಯಲ್ಲಿ ವೈಧ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಡೈನಾಮಿಕ್ ಎಸ್ಪಿ ಎಂ ನಾರಾಯಣ, ಡಿವೈಎಸ್ಪಿ ಗಣೇಶ ಕೆ.ಎಲ್, ಸಿಪಿಆಯ್ ಶಶಿಕಾಂತ ವರ್ಮಾ ರವರ ಮಾರ್ಗದರ್ಶನ ಮತ್ತು ಪಿಎಸ್ಐ ನಾಗಪ್ಪ.ಬಿ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಬ್ಬಂದಿಗಳಾದ ಎಎಸ್ಐ ನಾರಾಯಣ ರಾಠೋಡ್,ಹನುಮಂತ ಕಬಾಡಿ,ಸತೀಶ್ ಅಂಬಿಗ,
ಮಲ್ಲಿಕಾರ್ಜುನ ಕುದರಿ, ಚನ್ನ ಬಸಪ್ಪ ಕ್ಯಾರಕಟ್ಟಿ, ರಾಜಶೇಖರ ಅಂಗಡಿ, ಸುದರ್ಶನ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು..