ಮಂಗಳೂರು ಹಿಂದೂ ಕಾರ್ಯಕರ್ತನ ಹತ್ಯೆ ಕೇಸ್!

ಮಂಗಳೂರು: ಮೇ2 ರಂದು ಮಂಗಳೂರಿನ ಹೊರವಲಯದ ಬಜಪೆ ಕಿನ್ನಿಪದವು ಸಮೀಪದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮೇಲೆ ಮಾರಕಾಸ್ತ್ರಗಳನ್ನು ಬಳಸಿ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ದಾಳಿಯ ಬಳಿಕ ಹತ್ಯೆಯ ಆರೋಪಿಗಳು ಸ್ವಿಫ್ಟ್ ಕಾರನ್ನು ಏರಿ ಎಸ್ಕೇಪ್ ಆಗಿರುವುದು ಕಂಡು ಬಂದಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಓರ್ವ ಬುರ್ಖಾಧಾರಿ ಮಹಿಳೆ ಬೆಂಬಲ ನೀಡಿರುವುದು ಕಂಡು ಸ್ಥಳೀಯರ ವಿಡಿಯೋದಲ್ಲಿ ಕಂಡು ಬಂದಿದೆ.

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲೆಗಾರರಿಗೆ ಬುರ್ಖಾಧಾರಿ ಮಹಿಳೆ ಬೆಂಬಲಿಸಿದ್ದಳಾ ಎಂಬ ಅನುಮಾನಗಳು ಕಾಡುತ್ತಿವೆ. ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿರುವ ವಿಡಿಯೋದಲ್ಲಿ ಬುರ್ಖಾಧಾರಿ ಮಹಿಳೆ ಟ್ರಾಫಿಕ್ ಬಂದ್ ಮಾಡಿ ಕೊಲೆಗಾರರು ಕಾರನ್ನು ತೆಗೆದುಕೊಂಡು ಎಸ್ಕೇಪ್ ಆಗಲು ಸಹಕರಿಸಿದ್ಲಾ ಎಂಬ ಅನುಮಾನ ಕಾಡಲಾರಂಭಿಸಿದೆ. ಇನ್ನೊಂದೆಡೆ ಸುಹಾಸ್ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ರೂ ಕೂಡ ಸ್ಥಳೀಯರು ಆತನ ರಕ್ಷಣೆಗೆ ನೆರವಾಗದೇ ಇರುವುದು ಕೂಡ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹತ್ಯೆಯ ಹಿಂದೆ ಸ್ಥಳೀಯರ ಕೈವಾಡ ಇರಬಹುದು ಎಂಬ ಅನುಮಾನಗಳು ಉಂಟಾಗುತ್ತಿವೆ.