ರಾಕಿಭಾಯ್ ಜೊತೆಗಿನ ಅಪರೂಪದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ರಾಧಿಕಾ ಪಂಡಿತ್ ಅವರು ತಮ್ಮ ಪತಿ ಯಶ್ ಜೊತೆಗಿನ ಅಪರೂಪದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಕೆಜಿಎಫ್ 2 ಚಿತ್ರೀಕರಣದ ಸಮಯದಲ್ಲಿ ತೆಗೆದದ್ದಾಗಿದೆ. ಚಿತ್ರವು ಬಿಡುಗಡೆಯಾಗಿ ಮೂರು ವರ್ಷಗಳು ಪೂರ್ಣಗೊಂಡ ಸಂಭ್ರಮದಲ್ಲಿ ಈ ಫೋಟೋ ಹಂಚಿಕೊಳ್ಳಲಾಗಿದೆ ಎನ್ನಲಾಗಿದೆ .

ನಟಿ ರಾಧಿಕಾ ಪಂಡಿತ ಅವರು ಪತಿ ಯಶ್​​ಗೆ ಬೆಂಬಲವಾಗಿ ನಿಂತಿದ್ದಾರೆ. ಅವರು ಹೋದಲ್ಲಿ ಬಂದಲ್ಲಿ ಜೊತೆಗೆ ಇರುತ್ತಾರೆ. ಯಶ್ ಮುಂಬೈನಲ್ಲಿ ಶೂಟಿಂಗ್​ನಲ್ಲಿ ಕಾಣಿಸಿಕೊಂಡರೆ ರಾಧಿಕಾ ಕೂಡ ಅವರ ಜೊತೆ ನೀವು ಕಾಣಬಹುದು. ರಾಧಿಕಾ ಪಂಡಿತ್ ಅವರು ಈಗ ಒಂದು ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಾಕಿ ಭಾಯ್ ಜೊತೆ ರಾಧಿಕಾ ಪಂಡಿತ್ ಅವರು ನಿಂತಿದ್ದಾರೆ. ಹಾಗಾದರೆ, ರಾಧಿಕಾ ಅವರು ಈ ಫೋಟೋನ ಹಂಚಿಕೊಳ್ಳಲು ಕಾರಣವೇನು? ಅದಕ್ಕೆ ಕಾರಣವಾಗಿದ್ದೇ ‘ಕೆಜಿಎಫ್ 2’ ಸಿನಿಮಾ.

ಏಪ್ರಿಲ್ 14ರಂದು ‘ಕೆಜಿಎಫ್ 2’ ಚಿತ್ರವು ರಿಲೀಸ್ ಆಗಿ 3 ವರ್ಷಗಳು ತುಂಬಿವೆ. ಬಾಕ್ಸ್ ಆಫೀಸ್​ನಲ್ಲಿ ತನ್ನದೇ ಚಾಪು ಮೂಡಿಸಿದ ಈ ಚಿತ್ರಕ್ಕೆ ಈಗ ಮೂರು ವರ್ಷಗಳ ಸಂಭ್ರಮ. ಈ ಕಾರಣಕ್ಕೆ ಸಿನಿಮಾನ ನೆನಪು ಮಾಡಿಕೊಳ್ಳಲು ರಾಧಿಕಾ ಪಂಡಿತ್ ಅವರು ‘ರಾಕಿಭಾಯ್’ (ಯಶ್) ಜೊತೆ ಇರೋ ಫೋಟೋ ಪೋಸ್ಟ್ ಮಾಡಿದ್ದಾರೆ. ಟೇಕ್ ತೆಗೆದುಕೊಳ್ಳುವಾಗ ಮಧ್ಯದ ಸಮಯ ಎಂಬರ್ಥದಲ್ಲಿ ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.

ಯಶ್ ಅವರು ‘ಕೆಜಿಎಫ್ 2’ ಲುಕ್​ನ ಬದಲಿಸಿದ್ದಾರೆ. ಆದರೆ, ರಾಧಿಕಾ ಪಂಡಿತ್ ಹಂಚಿಕೊಂಡಿರುವ ಫೋಟೋದಲ್ಲಿ ನೀವು ಕೆಜಿಎಫ್​ ಲುಕ್​ನ ಕಾಣಬಹುದಾಗಿದೆ. ರಾಧಿಕಾ ಪಂಡಿತ್ ಅವರು ಟಿ-ಶರ್ಟ್ ಹಾಗೂ ಜೀನ್ಸ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ನೋಡಿದವರಿಗೆ ಕ್ಯಾರವಾನ್ ವಾಹನ ಎಂಬುದು ತಿಳಿಯುತ್ತದೆ. ರಾಕಿ ಭಾಯ್ ಲುಕ್ ಗಮನ ಸೆಳೆದಿದೆ.

ಪ್ರಶಾಂತ್ ನೀಲ್ ಅವರು ‘ಕೆಜಿಎಫ್ 2’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಯಶ್, ಸಂಜಯ್ ದತ್, ಪ್ರಕಾಶ್ ರಾಜ್, ಶ್ರೀನಿಧಿ ಶೆಟ್ಟಿ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ‘ಕೆಜಿಎಫ್’ ಚಿತ್ರದ ಮುಂದುವರಿದ ಭಾಗವೇ ಆಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 1200+ ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿದೆ ಎನ್ನಬಹುದು. ಈಗ ‘ಕೆಜಿಎಫ್ 2’ ರಿಲೀಸ್ ಆಗಿ ಮೂರು ವರ್ಷ ಕಳೆದ ಸಂದರ್ಭದಲ್ಲಿ ಚಿತ್ರಕ್ಕೆ ಮೂರನೇ ಚಾಪ್ಟರ್ ಬರುವ ಬಗ್ಗೆ ತಂಡದ ಕಡೆಯಿಂದ ಅಧಿಕೃತ ಮಾಹಿತಿ ಘೋಷಣೆ ಆಗಿದೆ. ಇದಕ್ಕೆ ಯಶ್ ಅವರ ಕಾಲ್​ಶೀಟ್ ಕೂಡ ಸಿಗಬೇಕಿದೆ.