ಮೋಹನ್ಲಾಲ್ ಅವರ ‘ಎಂಪುರಾನ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಕಂಡಿದೆ. 250 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ ಮಲಯಾಳಂ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಈ ಯಶಸ್ಸಿನ ನಂತರ, ಮೋಹನ್ಲಾಲ್ ಅವರ ಮುಂದಿನ ಚಿತ್ರ ‘ತುಡರುಮ್’ನ ಬಿಡುಗಡೆ ದಿನಾಂಕವನ್ನು ಏಪ್ರಿಲ್ 25 ಎಂದು ಘೋಷಿಸಲಾಗಿದೆ.

‘ಎಲ್2: ಎಂಪುರಾನ್’ ಸಿನಿಮಾದಲ್ಲಿ ಮೋಹನ್ಲಾಲ್ ಹಾಗೂ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ. ಈ ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮಲಯಾಳಂ ಚಿತ್ರ ಒಂದು ಗಲ್ಲಾ ಪೆಟ್ಟಿಗೆಯಲ್ಲಿ ಇಷ್ಟು ಗಳಿಕೆ ಮಾಡಿದ್ದು ಇದೇ ಮೊದಲು. ಈ ಚಿತ್ರ ಗೆಲ್ಲುತ್ತಿದ್ದಂತೆ ಮೋಹನ್ಲಾಲ್ ಸುಮ್ಮನೆ ಕುಳಿತಿಲ್ಲ. ಅವರ ನಟನೆಯ ಮತ್ತೊಂದು ಚಿತ್ರದ ರಿಲೀಸ್ ದಿನಾಂಕ ಘೋಷಿಸಿದ್ದಾರೆ. ಇದೇ ತಿಂಗಳು ಸಿನಿಮಾ ರಿಲೀಸ್ ಆಗಲಿದೆ ಅನ್ನೋದು ವಿಶೇಷ.
ಮೋಹನ್ಲಾಲ್ ಅವರಿಗೆ ಈಗ 64 ವರ್ಷ. ಈ ವಯಸ್ಸಿನಲ್ಲೂ ಅವರು ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ಅವರ ‘ಎಂಪುರಾನ್’ ಹಿಟ್ ಆಗುತ್ತಿದ್ದಂತೆ, ‘ತುಡರುಮ್’ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈ ಸಿನಿಮಾ ಏಪ್ರಿಲ್ 25ರಂದು ತೆರೆಗೆ ಬರಲಿದೆ. ಟ್ವಿಟರ್ ಮೂಲಕ ಮೋಹನ್ಲಾಲ್ ಈ ಮಾಹಿತಿ ನೀಡಿದ್ದಾರೆ. ‘ನಾವು ಆಗಸ್ಟ್ 25ರಂದು ಬರುತ್ತಿದ್ದೇವೆ’ ಎಂದು ಹೇಳಿರೋ ಮೋಹನ್ಲಾಲ್ ಅವರು, ‘ತುಡರುಮ್’ ರಿಲೀಸ್ ದಿನಾಂಕ ರಿವೀಲ್ ಮಾಡಿದ್ದಾರೆ.