ರಾತ್ರಿ ಹೊತ್ತಲ್ಲಿ ಕಳ್ಳರ ಕರಾಮತ್ತು: 8 ಲಾರಿಗಳ 16 ಬ್ಯಾಟರಿ, 150 ಲೀ ಡೀಸೆಲ್ ಕಳವು

ದೇವನಹಳ್ಳಿ, ಫೆಬ್ರವರಿ 23: ಒಂದೇ ರಾತ್ರಿಯಲ್ಲಿ 8 ಲಾರಿಗಳ 16 ಬ್ಯಾಟರಿ ಸೇರಿದಂತೆ 150 ಲೀ. ಡೀಸೆಲ್ (Diesel) ಕಳವು ಮಾಡಿ ಕಳ್ಳರು ತಮ್ಮ ಕೈಚಳಕ ತೋರಿಸಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ರಾತ್ರಿ ವೇಳೆ ಬ್ಯಾಟರಿ, ಡೀಸೆಲ್ ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ

ಸ್ಕಾರ್ಪಿಯೊ ಕಾರಿನಲ್ಲಿ ಬಂದಿದ್ದ ಮೂವರಿಂದ ರೈಲು ನಿಲ್ದಾಣದ ಬಳಿ 12 ಬ್ಯಾಟರಿ, ಹಳೆ ಬಸ್ ನಿಲ್ದಾಣದ 4 ಬ್ಯಾಟರಿ ಮತ್ತು ಪಾಲನಜೋಗನಹಳ್ಳಿ ಬಳಿ ನಿಲ್ಲಿಸಿದ್ದ ಲಾರಿಗಳಿಂದ 150 ಲೀ. ಡೀಸೆಲ್ ಕಳವು ಮಾಡಿದ್ದಾರೆ. ಕಳ್ಳರು ಬ್ಯಾಟರಿ, ಡೀಸಲ್​​ ಟಾರ್ಗೆಟ್​ನಿಂದ ಚಾಲಕರು ಬೆಚ್ಚಿಬಿದಿದ್ದಾರೆ..