ಟ್ರಂಪ್​ ಜತೆ​ ಮೆಗಾ ಡೀಲ್​: ಮೋದಿ ಬುದ್ಧಿವಂತಿಕೆ, ಚಾಣಾಕ್ಷತನವನ್ನ ಕೊಂಡಾಡಿದ ವಿದೇಶಿ ಮಾಧ್ಯಮಗಳು

ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಡ್ರೊನಾಲ್ಡ್​ ಟ್ರಂಪ್​ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಬಳಿಕ ಪ್ರಧಾನಿ ಮೋದಿಯವರ ಇದು ಮೊದಲನೇ ಭೇಟಿಯಾಗಿತ್ತು. ಮೋದಿಯ ರಾಜತಾಂತ್ರಿಕ ಚಾಣಾಕ್ಷತೆ, ಸೂಕ್ಷ್ಮತೆ, ವಿವೇಚನೆ, ಕೌಶಲ್ಯತೆ ಕಂಡು ವಿದೇಶಿ ಖಾಸಗಿ ಮಾಧ್ಯಮಗಳು ಅವರನ್ನು ಹಾಡಿಹೊಗಳುತ್ತಿವೆ. ಪ್ರಧಾನಿ ಮೋದಿಯವರು ಶುಕ್ರವಾರ ಶ್ವೇತಭವನದಲ್ಲಿ ಡೊನಾಲ್ಡ್​ ಟ್ರಂಪ್​ ಅವರನ್ನು ಭೇಟಿಯಾದರು. ಈ ವೇಳೆ “ರಕ್ಷಣಾ ವ್ಯವಸ್ಥೆ ಬಲಪಡಿಸುವುದು, ವಾಣಿಜ್ಯ-ವ್ಯಾಪಾರ, ಇಂಧನ, ಮೂಲಸೌಕರ್ಯ, ತಂತ್ರಜ್ಞಾನ ವೃದ್ಧಿ” ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಉಭಯ ನಾಯಕರು ಚರ್ಚಿಸಿದರು.
‘ಮೆಗಾ’ (MEGA) ಪಾಲುದಾರಿಕೆಗಾಗಿ ‘ಮಗಾ’ (MAGA) ಮತ್ತು ಮಿಗಾ (Make India Great Again-MIGA) ಒಂದಾಗಿವೆ ಎಂದು ಪ್ರಧಾನಿ ಮೋದಿಯವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜತೆಗೆ ನಡೆಸಿದ ಚರ್ಚೆ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.