ಫ್ಲೆಕ್ಸ್ ವಿಚಾರಕ್ಕೆ ಶಿವಮೊಗ್ಗ ಉದ್ವಿಗ್ನ: ಯುವಕನಿಗೆ ಚಾಕು ಇರಿತ

ಶಿವಮೊಗ್ಗ: ಫ್ಲೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಉದ್ವಿಗ್ನಗೊಂಡಿದೆ. ವೀರಸಾವರ್ಕರ್ ಫ್ಲೆಕ್ಸ್ ಅಳವಡಿಕೆ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ. ಗಲಬೆಯ ವೇಳೆ ಅಶೋಕ ನಗರ ಪ್ರದೇಶದಲ್ಲಿ ಪ್ರೇಮ್ ಸಿಂಗ್ (27) ಎಂಬ ಯುವಕನಿಗೆ ಚೂರಿ ಇರಿಯಲಾಗಿದೆ. ಗಾಂಧಿ ಬಜಾರ್ ನಲ್ಲಿ ಅಂಗಡಿ ಬಾಗಿಲು ಹಾಕಿಕೊಂಡು ಮನೆಗೆ ಹೊರಟಾಗ ದುಷ್ಕರ್ಮಿಗಳು ಚೂರಿ ಇರಿದಿದ್ದಾರೆ. ಯುವಕನನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.