
ಚಿಕ್ಕಮಗಳೂರು, ಫೆಬ್ರವರಿ 06: ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರದ ಹಣಕ್ಕಾಗಿ ನಿತ್ಯ ಪರದಾಟ ನಡೆಸಿರುವಂತಹ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲಾಡಳಿತದ ಮಹಾ ಎಡವಟ್ಟನಿಂದ ನಾಲ್ಕು ತಿಂಗಳದರೂ ಹಣ ಡ್ರಾ ಆಗದೇ ಇದೀಗ ಚೆಕ್ ಬೌನ್ಸ್ ಆಗಿದೆ. ಮಳೆಯಿಂದ ಮನೆ ಕಳೆದುಕೊಂಡು ಕುಟುಂಬ ಬೀದಿಗೆ ಬಿದ್ದಿದೆ.
ಹೀಗಾಗಿ ಜಿಲ್ಲೆಯ ಕಳಸ ತಾಲೂಕು ಕಚೇರಿಯಲ್ಲಿ ಪರಿಹಾರದ ಹಣ ನೀಡುವಂತೆ ಮನೆ ಕಳೆದುಕೊಂಡ ವ್ಯಕ್ತಿ ಲಕ್ಷ್ಮಣ್ ರಂಪಾಟ ಮಾಡಿದ್ದಾರೆ. ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿ ನಿವಾಸಿಯಾಗಿರುವ ಲಕ್ಷ್ಮಣ್, ಕಳೆದ ಮಳೆಗಾಲದಲ್ಲಿ ಅವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಸಂಪೂರ್ಣ ಹಾನಿಯಾಗಿದೆ.
ಮನೆ ಹಾನಿಯಾದ ಹಿನ್ನೆಲೆ ಜಿಲ್ಲಾಡಳಿತದಿಂದ 1 ಲಕ್ಷದ 20 ಸಾವಿರ ರೂ. ಪರಿಹಾರ ನೀಡಲಾಗಿದೆ. ಆದರೆ ಜಿಲ್ಲಾಡಳಿತ ನೀಡಿದ ಚೆಕ್ ಬೌನ್ಸ್ ಆಗಿದೆ. ಮೂರು ತಿಂಗಳಿನಿಂದ ಕಳಸ ತಾಲೂಕು ಕಚೇರಿಗೆ ಲಕ್ಷ್ಮಣ್ ಅಲೆದರು ಕೂಡ ಪರಿಹಾರದ ಹಣ ಸಿಕ್ಕಿಲ್ಲ.
ಹೀಗಾಗಿ ಕಳಸ ತಹಶಿಲ್ದಾರ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಣ ಬಿಡುಗಡೆ ಮಾಡಿ ಎಂದು ತಹಶಿಲ್ದಾರ್ಗೆ ಲಕ್ಷ್ಮಣ್ ಕ್ಲಾಸ್ ತೆಗೆದುಕೊಂಡಿದ್ದು, ಪರಿಹಾರದ ಹಣವನ್ನು ಡಿಸಿ ಬಳಿ ಕೇಳುವಂತೆ ಉಡಾಫೆ ಉತ್ತರ ನೀಡಿದ್ದಾರೆ.
