
ಬರೋಬ್ಬರಿ 29 ವರ್ಷಗಳ ನಂತರ ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ಅವರು ಯಾಣಗೆ ಭೇಟಿ ನೀಡಿ ಖುಷಿಪಟ್ಟಿದ್ದಾರೆ. ಅಲ್ಲಿಂದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಜೊತೆ ಪತ್ನಿ ಗೀತಾ ಕೂಡ ಯಾಣಗೆ ತೆರಳಿದ್ದಾರೆ. ಕ್ಯಾನ್ಸರ್ಗೆ ಅಮೆರಿಕದಲ್ಲಿ ಟ್ರೀಟ್ಮೆಂಟ್ ಪಡೆದು ಬಂದ ಅವರು ಸಿನಿಮಾ ಕೆಲಸಗಳಿಂದ ಬಿಡುವು ಪಡೆದಿದ್ದಾರೆ.
ನಟ ಶಿವರಾಜ್ಕುಮಾರ್ ಅವರು ಕ್ಯಾನ್ಸರ್ನಿಂದ ಗುಣಮುಖರಾಗಿದ್ದಾರೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆದು ವಾಪಸ್ ಬಂದಿರುವ ಅವರು ತಮ್ಮ ಇಷ್ಟದ ಕೆಲವು ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಈಗ ಅವರು ಯಾಣಗೆ ತೆರಳಿದ್ದಾರೆ.

ಶಿವಣ್ಣ, ರಮೇಶ್ ಅರವಿಂದ್, ಪ್ರೇಮಾ ನಟಿಸಿದ್ದ ‘ನಮ್ಮೂರ ಮಂದಾರ ಹೂವೇ’ ಸಿನಿಮಾದ ಚಿತ್ರೀಕರಣವನ್ನು ಯಾಣದಲ್ಲಿ ಮಾಡಲಾಗಿತ್ತು. ಈಗ ಅವರು ಮತ್ತೆ ಅದೇ ಜಾಗಕ್ಕೆ ಭೇಟಿ ನೀಡಿ ಶಿವಣ್ಣ ಖುಷಿಪಟ್ಟಿದ್ದಾರೆ.
ಆ ದಿನಗಳನ್ನು ಶಿವರಾಜ್ಕುಮಾರ್ ಅವರು ನೆನಪು ಮಾಡಿಕೊಂಡಿದ್ದಾರೆ. ‘ನಮ್ಮೂರ ಮಂದಾರ ಹೂವೆ ನಂತರ ಮತ್ತೆ ನನ್ನ ಯಾಣ ಭೇಟಿ 29 ವರ್ಷಗಳ ಬಳಿಕ’ ಎಂದು ಶಿವಣ್ಣ ಈ ಫೋಟೋ ಹಂಚಿಕೊಂಡಿದ್ದಾರೆ.
ಬಾಳಿನ ಬೆನ್ನು ಹತ್ತಿ, ನೂರಾರು ಊರು ಸುತ್ತಿ, ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು’ ಎಂದು ಹಾಡಿನ ಸಾಲುಗಳ ಮೂಲಕ ಕರುನಾಡಿನ ಸೌಂದರ್ಯವನ್ನು ಶಿವರಾಜ್ಕುಮಾರ್ ಅವರು ಬಣ್ಣಿಸಿದ್ದಾರೆ.



