Trivikram: ತ್ರಿವಿಕ್ರಮ್‌ ಮುಡಿಗೇರಿದ ಬಿಗ್‌ ಬಾಸ್‌ ಪಟ್ಟ..? ಸುಳಿವು ಬಿಟ್ಟುಕೊಟ್ಟ ಕಾಸ್ಟ್ಯೂಮ್..?

ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರ ಗ್ರ್ಯಾಂಡ್‌ ಫಿನಾಲೆಯ ಎರಡನೇ ದಿನದ ಕಾರ್ಯಕ್ರಮ ಆರಂಭವಾಗಿದ್ದು, ಕಾರ್ಯಕ್ರಮದ ಆರಂಭದಲ್ಲೇ ವಿನ್ನರ್‌ ಯಾರಾಗಬಹುದು ಎನ್ನುವ ಸುಳಿವು ವೀಕ್ಷಕರಿಗೆ ಸಿಕ್ಕಿದೆ. ಬಹುತೇಕರು ಊಹಿಸಿದ ಸ್ಪರ್ಧಿಯೇ ಬಿಗ್‌ ಬಾಸ್‌ನ ವಿಜೇತರಾಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಸಿಕ್ಕ ಸುಳಿವೇನು? ಇರುವ ಐವರಲ್ಲಿ ವಿನ್ನರ್‌ ಯಾರು ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ.

ಫಿನಾಲೆಗೆ ಬಂದ ಆರು ಜನರ ಪೈಕಿ ಭವ್ಯ ಗೌಡ ಈಗಾಗಲೇ ಎಲಿಮಿನೇಟ್‌ ಆಗಿದ್ದು, ಮೋಕ್ಷಿತಾ ಪೈ, ತ್ರಿವಿಕ್ರಮ್‌, ಉಗ್ರಂ ಮಂಜು, ಹನುಮಂತ ಹಾಗೂ ರಜತ್‌ ಟಾಪ್‌ ಐದು ಸ್ಪರ್ಧಿಗಳಾಗಿ ಹೊರ ಹೊಮ್ಮಿದ್ದಾರೆ. ಸದ್ಯ ಬಿಗ್‌ ಬಾಸ್‌ ಮನೆಯ ಒಳಗೂ ಹೊರಗೂ ಈ ಬಾರಿಯ ವಿನ್ನರ್‌ ಯಾರಾಗಬಹುದು ಎನ್ನುವ ಲೆಕ್ಕಚಾರ ಜೋರಾಗಿದೆ. ಈ ನಡುವೆ ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ ಮನೆಯಿಂದ ಹೊರ ಬಂದಿದ್ದಾರೆ.

ಹಾಗಾದರೆ ಉಳಿದ ಮೂವರಲ್ಲಿ ಅಂದರೆ ರಜತ್‌, ತ್ರಿವಿಕ್ರಮ್‌ ಹಾಗೂ ಹನುಮಂತ ಪೈಕಿ ವಿನ್ನರ್‌ ಯಾರು ಎನ್ನುವ ಸುಳಿವು ಈಗ ಸಿಕ್ಕಿದೆ. ಅದು ಕೂಡ ಸ್ಪರ್ಧಿ ಧರಿಸಿರುವ ಕಾಸ್ಟ್ಯೂಮ್ ನೋಡಿ ಇವರೇ ವಿನ್ನರ್‌ ಎಂದು ಊಹಿಸಬಹುದಾಗಿದೆ. ಅದು ಮತ್ಯಾರು ಅಲ್ಲ ಬಿಗ್‌ ಬಾಸ್‌ ಮನೆಯ ಮಾಸ್ಟರ್‌ ಮೈಂಡ್‌ ತ್ರಿವಿಕ್ರಮ್‌.

ಹೌದು ಈಗಾಗಲೇ ಶೋ ಆರಂಭವಾಗಿದ್ದು, ಶುಭ ಪೂಂಜಾ ಹಾಗೂ ವಿನಯ್‌ ಗೌಡ ಮನೆಯೊಳಗೆ ತೆರಳಿದ್ದಾರೆ. ಈ ವೇಳೆ ಬಿಗ್‌ ಬಾಸ್ ಮನೆಯೊಳಗಿರುವ ಸ್ಪರ್ಧಿಗಳು ಕೂಡ ಸಿದ್ಧರಾಗಿದ್ದು, ಸ್ಪರ್ಧಿಗಳಲ್ಲಿ ತ್ರಿವಿಕ್ರಮ್‌ ಧರಿಸಿರುವ ಬಟ್ಟೆಯಲ್ಲಿ ವಿನ್ನರ್‌ ಎನ್ನುವ ಸುಳಿವು ಇದೆ. ತ್ರಿವಿಕ್ರಮ್‌ ಧರಿಸಿರುವ ಜಾಕೆಟ್‌ನಲ್ಲಿ ಪಕ್ಷಿಯ ರೆಕ್ಕೆಯ ಚಿತ್ರವನ್ನು ಡಿಸೈನ್‌ ಮಾಡಲಾಗಿದೆ. ಈ ಬಾರಿಯ ವಿನ್ನರ್‌ ಟ್ರೋಫಿಯಲ್ಲೂ ಕೂಡ ಪಕ್ಷಿಯ ರೆಕ್ಕೆಯ ಚಿತ್ರವನ್ನು ಡಿಸೈನ್‌ ಮಾಡಲಾಗಿದೆ. ಹೀಗಾಗಿ ವಿನ್ನರ್‌ಗಾಗಿಯೇ ಆ ಬಟ್ಟೆಯನ್ನು ಡಿಸೈನ್‌ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಇನ್ನು ಕಳೆದ ಕೆಲವು ಸೀಜನ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ವಿಚಾರ ತಿಳಿಯುತ್ತದೆ. ಈ ಹಿಂದಿನ ಸೀಜನ್‌ಗಳಲ್ಲಿಯೂ ವಿನ್ನರ್‌ ಧರಿಸುವ ಬಟ್ಟೆಗೂ ಹಾಗೂ ಟ್ರೋಫಿಗೂ ಲಿಂಕ್‌ ಇರುತ್ತದೆ. ಒಂದು ವೇಳೆ ನಿಮಗೆ ಈ ಬಗ್ಗೆ ಹೌದು ಎನಿಸಿ ಜೊತೆಗೆ ಅನುಮಾನ ಬಂದರೆ ಕೂಡಲೇ ಹಳೆಯ ಸೀಜನ್‌ಗಳ ವಿನ್ನರ್‌ಗಳ ಕಾಸ್ಟ್ಯೂಮ್ ಹಾಗೂ ಟ್ರೋಫಿಗಳನ್ನು ಸೂಕ್ಷ್ಮವಾಗಿ ಗಮನಿಸಿ.