ಭಟ್ಕಳದಲ್ಲಿ ಗೋಮಾಂಸ‌ ಅಡ್ಡೆಗೆ ಪೋಲಿಸರ ದಾಳಿ- ಮೂವರು ಅಂದರ್

ಭಟ್ಕಳ ಜ.22: ಅಕ್ರಮವಾಗಿ ಜಾನುವಾರು ಮಾಂಸ ದಂಧೆ ನಡೆಸುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಭಟ್ಕಳ ಶಹರ ಪೋಲಿಸರು ಯಶಸ್ವಿಯಾಗಿದ್ದಾರೆ..

ಈ ಸಂದರ್ಭದಲ್ಲಿ ಮೂವರನ್ನು ಬಂಧಿಸಲಾಗಿದೆ. ಭಟ್ಕಳದ ಮುಗ್ಗುಂ ಕಾಲೋನಿಯ ನಿವಾಸಿಗಳಾದ ನಿಜಾಮುದ್ದೀನ ತಂದೆ ಮೊಹಮ್ಮದ ಇಸಾಕ್ ಮುಕ್ತಸರ (60), ಮೊಹಮ್ಮದ್ ತಸ್ವೀ‌ರ್ ತಂದೆ ಮೊಹಮ್ಮದ್ ಇಲಿಯಾಸ್ (40) ಮತ್ತು ಸಿದ್ದಿಕ್ ಸ್ಟ್ರೀಟ್ ನಿವಾಸಿ ಖಾಜಾ ಅಬುಲಾಸನ್ ತಂದೆ ಅಬು ಮೊಹಮ್ಮದ್ ಟೋನ್ಸೆ (55) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿತರು ಬುಧವಾರ ಸಂಜೆ ಐದುವರೆ ಸುಮಾರಿಗೆ ಭಟ್ಕಳ ಶಹರದ ಮುಗ್ಗುಂ ಕಾಲೋನಿಯ ನ್ಯಾಶನಲ್ ಸ್ವೀಟ್‌ನಲ್ಲಿನ ನಿಜಾಮುದ್ದೀನ ಮುಕ್ತಸರ್ ಮನೆಯ ಪಕ್ಕದ ಕೋಣೆಯಲ್ಲಿ ಮಾಂಸ ಕಡಿಯುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಯಾವುದೇ ಪರವಾನಿಗೆ ಇಲ್ಲದೆ ಇವರು ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಜಾನವಾರುವನ್ನು ಕಾನೂನು ಬಾಹಿರವಾಗಿ ಕಟಾವು ಮಾಡುತ್ತಿದ್ದರು. ದಾಳಿ ಸಂಧರ್ಭದಲ್ಲಿ ಸುಮಾರು 50ಸಾವಿರ ರೂ. ಮೌಲ್ಯದ 100 ಕೆ.ಜಿ ಯಷ್ಟು ಜಾನುವಾರು ಮಾಂಸ ಹಾಗೂ ಕಟಾವು ಮಾಡಲು ಉಪಯೋಗಿಸಿದ ಸಲಕರಣೆ ವಶಕ್ಕೆ ಪಡೆಯಲಾಗಿದೆ. ಭಟ್ಕಳ ಶಹರ ಪೋಲಿಸ್ ಠಾಣೆಯ ಉಪನಿರೀಕ್ಷಿಕ ಸೋನರಾಜ ರಾಥೋಡ‌ ದೂರು ದಾಖಲಿಸಿದ್ದು ತನಿಖೆ ಆರಂಭಿಸಿದ್ದಾರೆ..