ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಈಗಾಗಲೇ 6 ತಂಡಗಳ ಘೋಷಣೆಯಾಗಿದೆ. ಇದಾಗ್ಯೂ ಭಾರತ ತಂಡವನ್ನು ಇನ್ನೂ ಸಹ ಪ್ರಕಟಿಸಲಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿ. ಈ ಸರಣಿಗಾಗಿ ಭಾರತ ಏಕದಿನ ತಂಡವನ್ನು ಆಯ್ಕೆ ಮಾಡಬೇಕಿದ್ದು, ಅದರೊಂದಿಗೆ ಚಾಂಪಿಯನ್ಸ್ ಟ್ರೋಫಿಗೂ ಟೀಮ್ ಇಂಡಿಯಾದ ಘೋಷಣೆಯಾಗಲಿದೆ. ಅದಕ್ಕೂ ಮುನ್ನ ಐಸಿಸಿ ಟೂರ್ನಿಗೆ ಟೀಮ್ ಇಂಡಿಯಾ ಹೇಗಿರಬೇಕೆಂದು ಭಾರತ ತಂಡದ ಮಾಜಿ ಆಟಗಾರರಾದ ಸುನಿಲ್ ಗವಾಸ್ಕರ್ ಹಾಗೂ ಇರ್ಫಾನ್ ಪಠಾಣ್ ಸಲಹೆ ನೀಡಿದ್ದಾರೆ.
15 ಸದಸ್ಯರ ತಂಡದಲ್ಲಿ ಪರಿಪೂರ್ಣ ಬ್ಯಾಟರ್ ಗಳಾಗಿ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಬೇಕೆಂದು ಗವಾಸ್ಕರ್ ಮತ್ತು ಇರ್ಫಾನ್ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಪಠಾಣ್, ಸುನಿಲ್ ಗವಾಸ್ಕರ್ ಹೆಸರಿಸಿದ ತಂಡದಲ್ಲಿ ವಿಕೆಟ್ ಕೀಪರ್ ಗಳಾಗಿ ಕಾಣಿಸಿಕೊಂಡಿರುವುದು ಕೆಎಲ್ ರಾಹುಲ್, ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್. ಆಲ್ ರೌಂಡರ್ ಗಳಾಗಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆಯ್ಕೆ ಮಾಡಿದ್ದಾರೆ.
ಇನ್ನು ವೇಗದ ಬೌಲರ್ ಗಳಾಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಅವರನ್ನು ಹೆಸರಿಸಿದ್ದು, ಇವರ ಜೊತೆ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಗೆ ಸ್ಥಾನ ನೀಡಲಾಗಿದೆ. ಅದರಂತೆ ಇರ್ಫಾನ್ ಪಠಾಣ್ ಹಾಗೂ ಸುನಿಲ್ ಗವಾಸ್ಕರ್ ಹೆಸರಿಸಿದ ಭಾರತ ತಂಡ ಈ ಕೆಳಗಿನಂತಿದೆ…
ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಶುಭ್ ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಶಮಿ, ಜಸ್ ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.