ಈ ಒಂದೇ ಕಾರಣಕ್ಕೆ ಮುರ್ಡೇಶ್ವರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ

ಕೋಲಾರ ಮೂಲದ ನಾಲ್ವರು ವಿದ್ಯಾರ್ಥಿನಿಯರು ಸಾವನಪ್ಪಿದ ಬೆನ್ನಲ್ಲೇ ಸುರಕ್ಷತೆಯೆ ನೇಪ ಹೇಳಿ ಜಗತ್ಪ್ರಸಿದ್ಧ ಮುರ್ಡೇಶ್ವರ ಕಡಲ ತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ. ಕಳೆದ 19 ದಿನಗಳಿಂದ ಸರಿಯಾದ ಸುರಕ್ಷತೆ ಕ್ರಮ ಕೈಗೊಳ್ಳಲಾಗದೆ ಭಟ್ಕಳ ತಾಲೂಕಾಡಳಿತ ವಿಫಲ ಆದ ಪರಿಣಾಮ, ಮುರ್ಡೇಶ್ವರ ಪ್ರವಾಸಿ ತಾಣ ನಂಬಿ ಜೀವನ ಮಾಡುತ್ತಿದ್ದ ಸಾವಿರಾರು ಕುಟುಂಬಗಳ ಹೊಟ್ಟೆ ಮೇಲೆ ತಣ್ಣಿರ ಬಟ್ಟೆ ಬಿದ್ದಿದೆ ಈ ಕುರಿತ ವರದಿ ಇಲ್ಲಿದೆ.

ಕಾರವಾರ, (ಡಿಸೆಂಬರ್ 29): ಸದಾ ಜನಜಂಗುಳಿಯಿಂದ ತುಂಬಿ ತುಳಕುತ್ತಿದ್ದ ಕಡಲ ತೀರ ಖಾಲಿ ಹೊಡೆಯುತ್ತಿದೆ. ಸಾವಿರಾರು ಕುಟುಂಬಗಳಿಗೆ ನೇರವಾಗಿದ್ದ ಅಂಗಡಿಗಳಿಗೆ ಬೀಗ ಜಡಿಯಲಾಗಿದೆ. ವರ್ಷಾಂತ್ಯದಲ್ಲಿ ಅತಿ ಹೆಚ್ಚು ಪ್ರವಾಸಿಗರಿಂದ ತುಂಬಿರುತ್ತಿದ್ದ ಪ್ರವಾಸಿ ತಾಣ ಎಂದಿನಂತಿದೆ. ಆದ್ರೆ, ಡಿಸೆಂಬರ್ 10ರಂದು ಕೋಲಾರ ಮೂಲದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಕೊಚ್ಚಿ ಹೋಗಿ ಸಾವನಪ್ಪಿರುವ ಹಿನ್ನೆಲೆಯಲ್ಲಿ ಮುರ್ಡೇಶ್ವರ ಕಡಲ ತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಗೋವಾ ಮಾದರಿಯಲ್ಲಿ ಸುರಕ್ಷತೆ ಕ್ರಮ ಕೈಗೊಂಡು ಆದಷ್ಟು ಬೇಗ ಬೀಚ್ ಓಪನ್ ಮಾಡುವಂತೆ ಜಿಲ್ಲಾ ಉಸ್ತುವರಿ ಸಚಿವ ಮಂಕಾಳು ವೈದ್ಯ ಸೂಚಿಸಿದ್ದಾರೆ. ಆದ್ರೆ, ಪ್ರವಾಸಿಗರ ಸುರಕ್ಷತೆ ಕೈಗೊಳ್ಳುವಲ್ಲಿ ತಾಲೂಕಾಡಳಿತ ವಿಫಲವಾಗಿದೆ.

ಬೇರೆ ಯಾವುದೇ ಸುರಕ್ಷತೆ ಕ್ರಮ ಇದುವರೆಗೂ ಕೈಗೊಂಡಿಲ್ಲ. ಪ್ರಮುಖವಾಗಿ ಮುರ್ಡೇಶ್ವರ ಕಡಲ ತೀರ ದೇವಸ್ಥಾನ ಪಕ್ಕದಲ್ಲೆ ಇರುವುದರಿಂದ ಒಂದೇ ಸಮಯದಲ್ಲಿ ಸುಮಾರು ಎರಡರಿಂದ ಮೂರು ಸಾವೀರ ಜನ ಬೀಚ್ ಗೆ ಇಳಿಯುತ್ತಾರೆ. ಇಷ್ಟು ದೋಡ್ಡ ಸಂಖ್ಯೆಯ ಜನರ ಸುರಕ್ಷತೆಗಾಗಿ, ಕನಿಷ್ಟ ಮೂರು ವಾಚ್ ಟವರ್, ಸೈರನ್. ಬೀಚ್ ಸುತ್ತಲೂ ಸಿಸಿ ಕ್ಯಾಮರಾ, ಹಾಗೂ ನೀರುಪಾಲಾಗುತ್ತಿರುವ ರಕ್ಷಣೆಗೆ ಜೆಟ್ ಸ್ಕಿ ( ಯಾಂತ್ರಿಕೃತ ಸ್ಪೀಡ್ ಬೋಟ್), ಲೈಫ್ ಗಾರ್ಡ್ ಗಳಿಗೆ ಲೈಫ್ ಜಾಕೇಟ್ ಹೀಗೆ ಹತ್ತಾರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ, ಡಿಸೆಂಬರ್ 11 ರಂದು ಡಿಸಿ , ಎಸ್ ಪಿ ಸೇರಿದಂತೆ ಭಟ್ಕಳ ತಾಲೂಕಾಧಿಕಾರಿಗಳ ನೆತೃತ್ವದಲ್ಲಿ ನಡೆದ ಸಭೆಯಲ್ಲಿ ಭಟ್ಕಳ ಎಸಿ ಡಾ ನಯನಾಗೆ ಸಚಿವ ಮಂಕಾಳು ವೈದ್ಯ ಸೂಚನೆ ನೀಡಿದ್ದರು. ಆದ್ರೆ 19 ದಿನ ಕಳೆದರೂ ಇದುವರೆಗೂ ಇದ್ದ ರೋಪ್ ವನ್ನೇ ಮೂರು ಕಡೆ ಸ್ಥಳಾಂತರ ಮಾಡಿಸಿರುವುದು ಬಿಟ್ಟರೆ ಬಿಟ್ರೆ ಬೇರೆನೂ ಮಾಡಿಲ್ಲ.

ಆತಂಕದಲ್ಲಿವೆ ಮುರ್ಡೇಶ್ವರದ ಸಾವಿರಾರು ಕುಟುಂಬಗಳು

ವರ್ಷಾಂತ್ಯ ಹಾಗೂ ಹೊಸ ವರ್ಷಚರಣೆ ನಿಮಿತ್ತ ಪ್ರತಿ ವರ್ಷ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮುರ್ಡೇಶ್ವರ ಕಡಲ ತೀರಕ್ಕೆ ಜನ ಭೇಟಿ ನೀಡುತ್ತಿದ್ದರು. ಇದರಿಂದ ಸ್ಥಳಿಯವಾಗಿ ಚಿಕ್ಕ ಪುಟ್ಟ ಅಂಗಡಿಗಳನ್ನ ಹಾಕಿ ಜೀವನ ಮಾಡುತ್ತಿದ್ದ ಸಾವಿರಾರು ಕುಟುಂಬಗಳು ಜೀವನ ಮಾಡುತ್ತಿದ್ದವು. ಆದ್ರೆ ಸುರಕ್ಷತೆಯ ನೇಪ ಹೇಳಿ ಕಳೆದ 19 ದಿನಗಳಿಂದ ಬೀಚ್ ಕ್ಲೋಸ್ ಮಾಡಿ ಯಾವುದೇ ಸೂಕ್ತ ಸುರಕ್ಷತೆಯನ್ನ ಕೈ ಗೊಳ್ಳದೆ ಭಟ್ಕಳ ತಾಲೂಕಾಡಳಿತ ಬೇಜವಾಬ್ದಾರಿ ನಡೆಯಿಂದ ಸ್ಥಳಿಯರು ಆಕ್ರೋಶಿತರಾಗಿದ್ದಾರೆ. ನಿಮ್ಮಗಳ ನಿರ್ಲಕ್ಷ್ಯದಿಂದ ನಮ್ಮ ಹೊಟ್ಟೆಗೆ ತಣ್ಣಿರ ಬಟ್ಟೆ ಬಿದ್ದಿದೆ ಎಂದು ಗೋಳಾಡುತ್ತಿದ್ದಾರೆ.

ನೂರಾರು ಕಿ.ಮೀ ದೂರದಿಂದ ಬೀಚ್ ನಲ್ಲಿ ಎಂಜಾಯ್ ಮಾಡಬೇಕೆಂದು, ಶೈಕ್ಷಣಿಕ ಪ್ರವಾಸದ ನಿಮಿತ್ಯ ಮುರ್ಡೇಶ್ವರಕ್ಕೆ ಬರುವ ಸಾವಿರಾರು ವಿದ್ಯಾರ್ಥಿಗಳು ಸೊಪ್ಪೆ ಮೊರೆ ಮಾಡಿಕೊಂಡು ಹಿಂತಿರುಗುತ್ತಿದ್ಧಾರೆ. ಇನ್ನೂ ಯುವ ಯುವತಿಯರು ನವ ಜೋಡಿಗಳಂತೂ ನೂರಾರು ಕಿ.ಮೀ ದೂರದಿಂದ ಬಂದ್ರು ಎಂಜಾಯ್ ಮಾಡಲಾಗಲಿಲ್ಲ ಎಂದು ಬೇರೆ ಬೀಚ್ ಗಳತ್ತ ಮುಖ ಮಾಡುತ್ತಿದ್ದಾರೆ.

ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ. ಬೇರೆ ರಾಜ್ಯ ಹಾಗೂ ವಿದೇಶ ಹೋಗುವ ಪ್ರವಾಸಿಗರನ್ನ ಆಕರ್ಷೀಸುವ ಬಹುದಾಗಿತ್ತು. ಆದ್ರೆ ಇರುವ ಪ್ರವಾಸಿ ತಾಣವನ್ನೆ ಉಳಿಸಲಾಗದೆ ಪರದಾಡುತ್ತಿರುವುದು ನಿಜಕ್ಕೂ ವಿಷಾದನೀಯ.