ಬಿಯರ್ ಬಾಟಲಿ ಗಾಜಿನಿಂದ ಕತ್ತು ಸೀಳಿ ಹೋಟೆಲ್ ಬಾಣಸಿಗನ ಭೀಕರ ಹತ್ಯೆ

ಉಡುಪಿ: ಹೋಟೆಲ್ ಕಾರ್ಮಿಕರೊಬ್ಬರನ್ನು ಬಿಯರ್ ಬಾಟಲಿ ಗಾಜಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಮಣಿಪಾಲ ಅನಂತ ಕಲ್ಯಾಣನಗರದ ಬಳಿ ಮೃತದೇಹ ಬೆಳಗ್ಗೆ ಕಂಡುಬಂದಿದೆ. ಮೃತನು ಮಣಿಪಾಲದ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಕೇರಳ ಮೂಲದ ಕಾಸರಗೋಡಿನ ಶ್ರೀಧರ್ ನಾಯಕ ಎಂದು ಗುರುತಿಸಲಾಗಿದೆ. ಬೆಳಗ್ಗೆ ಬಾಡಿಗೆ ಮನೆಯಿಂದ ಹೋಟೆಲ್‌ಗೆ ಹೋಗುವಾಗ ದುಷ್ಕರ್ಮಿಗಳು ಹತ್ಯೆ ಮಾಡಿರುವುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಉಡುಪಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.