ದಿನ ಭವಿಷ್ಯ: 05/12/2024

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನುರಾಧಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ವೃದ್ಧಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:48 ರಿಂದ 03:13ರ ವರೆಗೆ, ಯಮಘಂಡ ಕಾಲ ಸಂಜೆ 06:45 ರಿಂದ 08:10 ರವರೆಗೆ, ಗುಳಿಕ ಕಾಲ ಬೆಳಿಗ್ಗೆ 09:34ರಿಂದ 10:59 ರವರೆಗೆ.

ಮೇಷ: ಸಂಗಾತಿಯಿಂದ ಧನಾಗಮನ, ಪಾಲುದಾರಿಕೆ ವ್ಯವಹಾರದಿಂದ ಅನುಕೂಲ, ಉದ್ಯೋಗದಲ್ಲಿ ಬಡ್ತಿ, ಮಾನ ಸನ್ಮಾನಗಳು.

ವೃಷಭ: ವಾಹನ ಅಪಘಾತಗಳಾಗುವ ಎಚ್ಚರಿಕೆ, ಕೋರ್ಟ್ ಮೆಟ್ಟಿಲೇರುವ ಸಂದರ್ಭ, ಉದ್ಯೋಗ ಸ್ಥಳದಲ್ಲಿ ಸಾಲ ಮಾಡುವ ಪರಿಸ್ಥಿತಿ.

ಮಿಥುನ: ದಾಂಪತ್ಯದಲ್ಲಿ ಸಮಸ್ಯೆ, ಆರ್ಥಿಕ ಸಹಾಯ, ಪ್ರೀತಿ-ಪ್ರೇಮ ವಿಷಯಗಳಲ್ಲಿ ಸಮಸ್ಯೆ

ಕಟಕ: ಅಧಿಕಾರಿಗಳಿಂದ ಅನುಕೂಲ, ಅನಾರೋಗ್ಯ ಸಮಸ್ಯೆ, ಆತ್ಮಾಭಿಮಾನದಿಂದ ಬದುಕುವ ಆಲೋಚನೆ, ಆಸ್ತಿ ವಿಷಯಗಳಲ್ಲಿ ತೊಂದರೆ ಸಂಭವ.

ಸಿಂಹ: ಅಧಿಕ ಖರ್ಚು, ಆರೋಗ್ಯ ಸಮಸ್ಯೆಗಳು, ಪ್ರೇಮದ ವಿಷಯದಲ್ಲಿ ನಿಧಾನ, ಸಂಗಾತಿ ನಡವಳಿಕೆಯಲ್ಲಿ ಸಂಶಯ.

ಕನ್ಯಾ: ಆಸ್ತಿಯಿಂದ ನಷ್ಟ, ಮಿತ್ರರಿಂದ ಒತ್ತಡಗಳು ಹೆಚ್ಚು, ಮಹಿಳಾ ಮಿತ್ರರಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗವಕಾಶ.

ತುಲಾ: ನೆರೆಹೊರೆಯವರಿಂದ ಬಾಧೆ, ಸ್ವಂತ ವ್ಯಾಪಾರ ಕ್ಷೇತ್ರದಲ್ಲಿ ಲಾಭ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ.

ವೃಶ್ಚಿಕ: ಉದ್ಯೋಗದಲ್ಲಿ ನಷ್ಟ, ವೃತ್ತಿಪರರಿಗೆ ಅನುಕೂಲ, ಕೃಷಿಕರಿಗೆ ಉತ್ತಮ ವಾತಾವರಣ, ಪ್ರಶಂಸೆಗೆ ಪಾತ್ರರಾಗುವಿರಿ.

ಧನಸ್ಸು: ತಂದೆಯೊಡನೆ ಮನಸ್ತಾಪ, ಪ್ರಯಾಣದಲ್ಲಿ ಅಡೆತಡೆ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಧಾನ, ಪೂರ್ವಿಕರು ಮಾಡಿದ ಸಾಲದ ಚಿಂತೆ.

ಮಕರ: ಪ್ರೀತಿ-ಪ್ರೇಮದಲ್ಲಿ ನಿರಾಸೆ, ಅಪಘಾತಗಳಾಗುವ ಸನ್ನಿವೇಶ, ಚಾಲನೆಯಲ್ಲಿ ಎಚ್ಚರಿಕೆ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆಗಳು.

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಲಾಭ, ದುಶ್ಚಟಗಳಿಗೆ ದಾಸರಾಗುವ ಸಂಭವ, ತಂದೆಯಿಂದ ಲಾಭ.

ಮೀನ: ಅನಾರೋಗ್ಯ ಸಮಸ್ಯೆ, ಮಹಿಳಾ ಶತ್ರು ಕಾಟಗಳು, ನೋವು ಮತ್ತು ನಿದ್ರಾಭಂಗ, ಅಧಿಕಾರಿಗಳಿಂದ ನಷ್ಟ.