ಕುಂದಾಪುರ : ತಾಲೂಕಿನ ಬೀಜಾಡಿ ಸಮುದ್ರ ತೀರಕ್ಕೆ ಇಳಿದ ನಾಲ್ವರಲ್ಲಿ ಇಬ್ಬರು ನೀರುಪಾಲಾದ ಘಟನೆ ನಡೆದಿದೆ.
ಶುಭ ಕಾರ್ಯ ನಿಮಿತ್ತ ಬೆಂಗಳೂರಿನಿಂದ ಬಂದಿದ್ದ ಯುವಕರು ಬೀಜಾಡಿಯ ರಿಸಾರ್ಟ್ ವೊಂದರಲ್ಲಿ ತಂಗಿದ್ದರು. ಇಂದು ಬೆಳಗ್ಗೆ ನಾಲ್ವರು ಯುವಕರು ಸಮುದ್ರಕ್ಕಿಳಿದಿದ್ದರು. ಸಮುದ್ರಕ್ಕೆ ಇಳಿದ ನಾಲ್ವರಲ್ಲಿ ಇಬ್ಬರು ನೀರುಪಾಲಾಗಿದ್ದು, ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರು ದಾಸರಹಳ್ಳಿ ನಿವಾಸಿಯಾದ ಸಂತೋಷ್ ಮತ್ತು ಕುಂದಾಪುರ ಮೂಲದ ಅಜಯ್ ನೀರುಪಾಲಾದವರು. ಮೋಕ್ಷಿತ್ ಮತ್ತು ಶ್ರೀಯಾನ್ ಅಪಾಯದಿಂದ ಪಾರಾಗಿದ್ದಾರೆ.
ಓರ್ವ ಯುವಕನ ಶವ ಪತ್ತೆ ಮತ್ತೊಬ್ಬನಿಗಾಗಿ ಶೋಧ ನಡೆಸಲಾಗಿದೆ. ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.