ಬೆಂಗಳೂರು: ಬಾಲಕನ ತಲೆಯ ಮೇಲೆ ಟಾಟಾ ಏಸ್ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಚಾಮರಾಜಪೇಟೆಯ ಗುಡ್ಡಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಾಲಕ ತನ್ನ ಪಾಡಿಗೆ ಮನೆಯ ಎದುರುಗಡೆ ಓಡಾಡಿಕೊಂಡಿದ್ದ. ಯಾರನ್ನೂ ಕೂಗಿಕೊಂಡು ಓಡಿ ಹೋಗ್ತಿದ್ದ ಬಾಲಕನ ಕೈಗೆ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ತಾಗಿದೆ. ಈ ವೇಳೆ ಆಯತಪ್ಪಿ ರಸ್ತೆಗೆ ಬಿದ್ದಿದ್ದಾನೆ. ಪಕ್ಕದಲ್ಲೇ ಬರುತ್ತಿದ್ದ ಟಾಟಾ ಏಸ್ ಬಾಲಕನ ತಲೆ ಮೇಲೆ ಹರಿದಿದೆ. ಸ್ಥಳದಲ್ಲೇ ಬಾಲಕ ಪ್ರಾಣ ಬಿಟ್ಟಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.