ದಾಂಡೇಲಿ: ಕಾಳಿ ನದಿಗೆ ಮಹಿಳೆಯೋರ್ವಳು ಜಿಗಿದ ಘಟನೆ ನಗರದ ಕುಳಗಿ ರಸ್ತೆಯ ಸೇತುವೆ ಬಳಿ ಗುರುವಾರ ನಡೆದಿದೆ. ಅಂದಾಜು 30 ವರ್ಷದ ಮಹಿಳೆ ಎಂದು ತಿಳಿದು ಬಂದಿದೆ.
ಜಿಗಿದ ವಿಷಯ ತಿಳಿದು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದರು. ವೈಲ್ಡರ್ ನೆಸ್ಟ್ ಮತ್ತು ಪ್ರೈ ಕ್ಯಾಚರ್ ನವರ ರಾಷ್ಟ್ರ ಜೊತೆಗೆ ನುರಿತ ಸಿಬ್ಬಂದಿಗಳ ತಂಡವನ್ನು ಕರೆಸಿ, ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ನದಿಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿದ್ದು ಹರಿವು ಹೆಚ್ಚಾಗಿದ್ದರಿಂದ ಈವರೆಗೂ ಮಹಿಳೆ ಪತ್ತೆಯಾಗಿಲ್ಲ. ನಿನ್ನೆ ರಾತ್ರಿ ಸಮಯದಲ್ಲಿ ಕಾರ್ಯಾಚರಣೆ ಕಷ್ಟವಾಗಿದ್ದರಿಂದ ಶೋಧ ಕಾರ್ಯಾಚರಣೆಯನ್ನು ಇಂದು ಮುಂದುವರಿಸಲಾಗುತ್ತದೆ.