ವಿಶ್ವವಿಖ್ಯಾತ ಮೈಸೂರು ದಸರಾ 2024ಕ್ಕೆ ತಯಾರಿ ಜೋರಾಗಿ ನಡೆದಿದೆ. ದಸರಾವನ್ನು ವೀಕ್ಷಿಸಲು ರಾಜ್ಯ, ಅಂತರರಾಜ್ಯ, ವಿದೇಶದಿಂದಲೂ ಜನರು ಆಗಮಿಸುತ್ತಾರೆ. ಇದರಿಂದ ಮೈಸೂರಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಸಹಜವಾಗಿ ಹೆಚ್ಚಳವಾಗಲಿದೆ. ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸಲು ನೈಋತ್ಯ ರೈಲ್ವೆ ವಲಯವು ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಣೆ ಮಾಡಲಿದೆ.
ಬೆಂಗಳೂರು, ಸೆಪ್ಟೆಂಬರ್ 24: ದಸರಾ 2024ಕ್ಕೆ ಸಂಬಂಧ ಮೈಸೂರಿಗೆ ಪ್ರಯಾಣಿಸುವರ ಸಂಖ್ಯೆ ಅಧಿಕವಾಗುವುದರಿಂದ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಲಿದೆ. ಪ್ರಯಾಣಿಕರ ನಿರೀಕ್ಷಿತ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸಲು ನೈಋತ್ಯ ರೈಲ್ವೆ ವಲಯವು 34 ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಣೆ ಮಾಡಲಿದೆ.
ಹೆಚ್ಚು ಬೋಗಿಗಳನ್ನ ಜೋಡಿಸುವ ರೈಲುಗಳ ವಿವರ
ಒಂದು ಸ್ಲೀಪರ್ ಕ್ಲಾಸ್
- ಅಕ್ಟೋಬರ್ 4 ರಿಂದ 15 ರವರೆಗೆ ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ ಎಕ್ಸ್ಪ್ರೆಸ್
- ಅಕ್ಟೋಬರ್ 1 ರಿಂದ 12ರವರೆಗೆ ರೈಲು ಸಂಖ್ಯೆ 17302 ಬೆಳಗಾವಿ-ಮೈಸೂರು ಎಕ್ಸಪ್ರೆಸ್
- ಅಕ್ಟೋಬರ್ 2 ರಿಂದ 13ರವರೆಗೆ ರೈಲು ಸಂಖ್ಯೆ 06233/06234 ಮೈಸೂರು-ಚಾಮರಾಜನಗರ-ಮೈಸೂರು ಎಕ್ಸ್ಪ್ರೆಸ್
- ಅಕ್ಟೋಬರ್ 2 ರಿಂದ 13ರವರೆಗೆ ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟೆ ಬಸವ ಎಕ್ಸ್ಪ್ರೆಸ್
- ಅಕ್ಟೋಬರ್ 3 ರಿಂದ 14ರವರೆಗೆ ರೈಲು ಸಂಖ್ಯೆ 17308 ಬಾಗಲಕೋಟೆ-ಮೈಸೂರು ಬಸವ ಎಕ್ಸಪ್ರೆಸ್
- ಅಕ್ಟೋಬರ್ 1 ರಿಂದ 12 ರವರೆಗೆ ರೈಲು ಸಂಖ್ಯೆ 16591 ಎಸ್ಎಸ್ಎಸ್ ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸಪ್ರೆಸ್.
- ಅಕ್ಟೋಬರ್ 4 ರಿಂದ 15 ರವರೆಗೆ ರೈಲು ಸಂಖ್ಯೆ 16592 ಮೈಸೂರು-ಎಸ್ಎಸ್ಎಸ್ ಹುಬ್ಬಳ್ಳಿ ಹಂಪಿ ಎಕ್ಸಪ್ರೆಸ್
- ಅಕ್ಟೋಬರ್ 2 ರಿಂದ 13 ರವರೆಗೆ ರೈಲು ಸಂಖ್ಯೆ 16535 ಮೈಸೂರು-ಪಂಢರಪುರ ಗೋಲಗುಂಬಜ್ ಎಕ್ಸಪ್ರೆಸ್
- ಅಕ್ಟೋಬರ್ 3 ರಿಂದ 14 ರವರೆಗೆ ರೈಲು ಸಂಖ್ಯೆ 16536 ಪಂಢರಪುರ ಗೋಲಗುಂಬಜ್ ಎಕ್ಸಪ್ರೆಸ್
ಎರಡು ಸ್ಲೀಪರ್ ಕ್ಲಾಸ್
- ಅಕ್ಟೋಬರ್ 3 ರಿಂದ 12ರವರೆಗೆ ರೈಲು ಸಂಖ್ಯೆ 16227 ಮೈಸೂರು-ತಾಳಗುಪ್ಪ ಎಕ್ಸ್ಪ್ರೆಸ್
- ಅಕ್ಟೋಬರ್ 4 ರಿಂದ 13ರವರೆಗೆ ರೈಲು ಸಂಖ್ಯೆ 16228 ತಾಳಗುಪ್ಪ-ಮೈಸೂರು ಎಕ್ಸ್ಪ್ರೆಸ್
ಒಂದು ಸಾಮಾನ್ಯ ದ್ವಿತೀಯ ದರ್ಜೆ ಬೋಗಿ
- ಅಕ್ಟೋಬರ್ 4 ರಿಂದ 13ರವರೆಗೆ ರೈಲು ಸಂಖ್ಯೆ 06543/06544 ಮೈಸೂರು-ಚಾಮರಾಜನಗರ-ಮೈಸೂರು ಪ್ಯಾಸೆಂಜರ್ ಸ್ಪೆಷಲ್
- ಅಕ್ಟೋಬರ್ 4 ರಿಂದ 13ರವರೆಗೆ ರೈಲು ಸಂಖ್ಯೆ 16221 ತಾಳಗುಪ್ಪ-ಮೈಸೂರು ಕುವೆಂಪು ಎಕ್ಸಪ್ರೆಸ್
- ಅಕ್ಟೋಬರ್ 3 ರಿಂದ 12ರವರೆಗೆ ಮೈಸೂರು-ತಾಳಗುಪ್ಪ ಕುವೆಂಪು ಎಕ್ಸಪ್ರೆಸ್
- ಅಕ್ಟೋಬರ್ 3 ರಿಂದ 12ರವರೆಗೆ ರೈಲು ಸಂಖ್ಯೆ 06273/06274 ಕೆಎಸ್ಆರ್ ಬೆಂಗಳೂರು-ಅರಸೀಕೆರೆ-ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್
- ಅಕ್ಟೋಬರ್ 3 ರಿಂದ 12ರವರೆಗೆ ರೈಲು ಸಂಖ್ಯೆ 06581/06582 ಕೆಎಸ್ಆರ್ ಬೆಂಗಳೂರು-ಚನ್ನಪಟ್ಟಣ-ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್.
- ಅಕ್ಟೋಬರ್ 3 ರಿಂದ 12ರವರೆಗೆ ರೈಲು ಸಂಖ್ಯೆ 06213 ಅರಸೀಕೆರೆ-ಮೈಸೂರು ಪ್ಯಾಸೆಂಜರ್
- ಅಕ್ಟೋಬರ್ 5 ರಿಂದ 14ರವರೆಗೆ ರೈಲು ಸಂಖ್ಯೆ 06214 ಮೈಸೂರು-ಅರಸೀಕೆರೆ ಪ್ಯಾಸೆಂಜರ್
- ಅಕ್ಟೋಬರ್ 3 ರಿಂದ 12ರವರೆಗೆ ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಎಕ್ಸಪ್ರೆಸ್
- ಅಕ್ಟೋಬರ್ 5 ರಿಂದ 14ರವರೆಗೆ ರೈಲು ಸಂಖ್ಯೆ 16226 ಶಿವಮೊಗ್ಗ ಟೌನ್-ಮೈಸೂರು ಎಕ್ಸಪ್ರೆಸ್
- ಅಕ್ಟೋಬರ್ 3 ರಿಂದ 12ರವರೆಗೆ ರೈಲು ಸಂಖ್ಯೆ 07365 ಶಿವಮೊಗ್ಗ ಟೌನ್-ಚಿಕ್ಕಮಗಳೂರು ಪ್ಯಾಸೆಂಜರ್
- ಅಕ್ಟೋಬರ್ 5 ರಿಂದ 14ರವರೆಗೆ ರೈಲು ಸಂಖ್ಯೆ 07366 ಚಿಕ್ಕಮಗಳೂರು-ಶಿವಮೊಗ್ಗ ಟೌನ್ ಪ್ಯಾಸೆಂಜರ್
- ಅಕ್ಟೋಬರ್ 4 ರಿಂದ 13ರವರೆಗೆ ರೈಲು ಸಂಖ್ಯೆ 16239/16240 ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಎಕ್ಸ್ಪ್ರೆಸ್
- ಅಕ್ಟೋಬರ್ 1 ರಿಂದ 12ರವರೆಗೆ ರೈಲು ಸಂಖ್ಯೆ 06267 ಅರಸೀಕೆರೆ-ಮೈಸೂರು ಪ್ಯಾಸೆಂಜರ್
- ಅಕ್ಟೋಬರ್ 4 ರಿಂದ 15ರವರೆಗೆ ರೈಲು ಸಂಖ್ಯೆ 06268 ಮೈಸೂರು-ಅರಸೀಕೆರೆ ಪ್ಯಾಸೆಂಜರ್
- ಅಕ್ಟೋಬರ್ 1 ರಿಂದ 12ರವರೆಗೆ ರೈಲು ಸಂಖ್ಯೆ 06269 ಮೈಸೂರು-ಎಸ್ಎಂವಿಟಿ ಬೆಂಗಳೂರು ಪ್ಯಾಸೆಂಜರ್
- ಅಕ್ಟೋಬರ್ 3 ರಿಂದ 14ರವರೆಗೆ ರೈಲು ಸಂಖ್ಯೆ 06270 ಎಸ್ಎಂವಿಟಿ ಬೆಂಗಳೂರು-ಮೈಸೂರು
- ಅಕ್ಟೋಬರ್ 2 ರಿಂದ 13ರವರೆಗೆ ರೈಲು ಸಂಖ್ಯೆ 16529 ಎಸ್ಎಂವಿಟಿ ಬೆಂಗಳೂರು-ಕರೈಕಲ್ ಎಕ್ಸ್ಪ್ರೆಸ್
- ಅಕ್ಟೋಬರ್ 3 ರಿಂದ 14ರವರೆಗೆ ಕರೈಕಲ್-ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ಗೆ ಹೆಚ್ಚುವರಿ ಬೋಗಿಗಳನ್ನು ಜೋಡಣೆ ಮಾಡಲಾಗುತ್ತದೆ ಎಂದು ನೈಋತ್ಯ ರೈಲ್ವೆ ವಲಯ ತಿಳಿಸಿದೆ.