ದೊಡ್ಡಬಳ್ಳಾಪುರ: ಮಗನೇ ತಾಯಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಚಾಕುವಿನಿಂದ ಕತ್ತು ಸೀಳಿ ತಾಯಿಯ ಬರ್ಬರ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ಹೊರವಲಯದ ರಾಗರಾಳ್ಳಗುಟ್ಟೆ ಬಳಿ ನಡೆದಿದೆ. ಗ್ರಾಮದ ರತ್ನಮ್ಮ (56) ಕೊಲೆಯಾದವರು. ಮಗ ಗಂಗರಾಜು ಕೊಲೆ ಆರೋಪಿ ಆಗಿದ್ದಾನೆ.
ಕ್ಷುಲ್ಲಕ ಕಾರಣಕ್ಕೆ ತಾಯಿ-ಮಗನ ನಡುವೆ ಜಗಳ ಶುರುವಾಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಗಂಗರಾಜು ತಾಯಿಯನ್ನು ಕೊಂದಿದ್ದಾನೆ. ಕೊಲೆ ನಂತರ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಹೊರವಲಯದ ರಾಗರಾಳ್ಳಗುಟ್ಟೆಯಲ್ಲಿ ಪ್ರಕರಣ ದಾಖಲಾಗಿದೆ.