ತುಮಕೂರು, ಜೂ.23: ಇತ್ತೀಚೆಗೆ ಕೆಲವೆಡೆ ಭರ್ಜರಿ ಮಳೆ ಆಗಿದ್ದು, ಹಚ್ಚ ಹಸಿರಿನಿಂದ ಪ್ರಕೃತಿ ಕಂಗೊಳಿಸುತ್ತಿದೆ. ಅದರಂತೆ ತುಮಕೂರು ತಾಲೂಕಿನ ಪ್ರಸಿದ್ಧ ದೇವರಾಯನದುರ್ಗ ಬೆಟ್ಟ ಹಾಗೂ ನಾಮದಚಿಲುಮೆಯ ಪ್ರಕೃತಿ ಸೊಬಗು ಕೈ ಬೀಸಿ ಕರೆಯುತ್ತಿದೆ. ಮಳೆ ಸುರಿದಿದ್ದರಿಂದ ಪ್ರವಾಸಿ ತಾಣಗಳ ಅಂದ ಮತ್ತಷ್ಟು ಹೆಚ್ಚಾಗಿದ್ದು, ನೋಡುಗರ ಮನಸೆಳೆಯುತ್ತಿವೆ. ಇನ್ನು ಬೆಂಗಳೂರುನಿಂದ ಕೇವಲ 70 ಕಿಲೋಮೀಟರ್ ದೂರದಲ್ಲಿರುವ ತುಮಕೂರಿನ ದೇವರಾಯನದುರ್ಗ ಹಾಗೂ ನಾಮದ ಚಿಲುಮೆಯಂತೂ ಮಳೆಗೆ ಹಸಿರುನಿಂದ ಕಂಗೋಳಿಸುತ್ತಿದ್ದು, ಪ್ರವಾಸಿಗರ ಮನ ಸೆಳೆಯುತ್ತಿದೆ.
ಇನ್ನು ನಾಮದಚಿಲುಮೆಯಲ್ಲಿ ಜಿಂಕೆವನ ಇದ್ದು, ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೂ ಇಲ್ಲಿಗೆ ಬಂದು ಆರಾಮವಾಗಿ ವಿಹಾರ ಮಾಡಬಹುದು. ಬೆಳ್ಳಂಬೆಳಿಗ್ಗೆ ಅಂತೂ ಬಂದರೆ ಕಣ್ ಮುಂದೆಯೆ ಮೋಡಗಳು ಪಾಸ್ ಆಗುತ್ತವೆ. ಕಾಡು ಪ್ರಾಣಿಗಳ ದರ್ಶನ, ಚಿಕ್ಕ ಮಕ್ಕಳಿಗೆ ಹೊರಸಂಚಾರ ಆಟವಾಡಲು ಕೂಡ ಯೋಗ್ಯವಾದ ಸ್ಥಳವಿದ್ದು, ವಿಕೇಂಡ್ ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.
ಬೆಂಗಳೂರು, ತುಮಕೂರು ಸೇರಿದಂತೆ ಅಕ್ಕ-ಪಕ್ಕದ ಜಿಲ್ಲೆಗಳಿಂದ ಕಾಲೇಜು ವಿದ್ಯಾರ್ಥಿಗಳು, ಜೋಡಿಗಳು ಒಮ್ಮೆ ಕಣ್ ಹಾಯಿಸುತ್ತಿದ್ದಾರೆ. ಇನ್ನು ದೇವರಾಯನದುರ್ಗ ಬೆಟ್ಟ ಕೂಡ ಚಿಕ್ಕಮಗಳೂರು, ಮಲೆನಾಡಿನಂತೆ ಭಾಸವಾಗುತ್ತಿದ್ದು, ಆಯಾಸ ಕಳೆಯಲು ಉತ್ತಮ ಸ್ಥಳವಾಗಿದೆ. ಒಟ್ಟಾರೆ ಬೆಂಗಳೂರಿನಿಂದ ಕೇವಲ 70 ಕಿಲೋಮೀಟರ್ ದೂರವಿದ್ದು, ವಿಕೇಂಡ್ ನಲ್ಲಿ ಬರುವವರಿಗೆ ತೀರಾ ಹತ್ತಿರವಾಗಿದೆ.