ಆ್ಯಕ್ಷನ್ ಸೀನ್ ವೇಳೆ ಪ್ರಿಯಾಂಕಾ ಚೋಪ್ರಾ ಕುತ್ತಿಗೆಗೆ ಗಾಯ

ಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಶೂಟಿಂಗ್ ಸೆಟ್‌ನಲ್ಲಿ ನಟಿಗೆ ಗಾಯ ಮಾಡಿಕೊಂಡಿದ್ದಾರೆ. ಚಿತ್ರೀಕರಣ ವೇಳೆ ಏನಾಯ್ತು ಎಂದು ಪ್ರಿಯಾಂಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಹಾಲಿವುಡ್‌ನಲ್ಲಿ ರೊಮ್ಯಾನ್ಸ್ ಮಾಡೋಕೆ ಅವಕಾಶವೇ ಇಲ್ಲ. ಹೀಗಾಗಿ `ಆ್ಯಕ್ಷನ್ ಲೇಡಿ’ ಆಗಿ ಮಿಂಚಲು ನಟಿ ಪಣ ತೊಟ್ಟಂತಿದೆ. ಭಾರೀ ಉತ್ಸಾಹದಲ್ಲಿ ‘ದಿ ಬ್ಲಫ್’ ಚಿತ್ರಕ್ಕೋಸ್ಕರ ಹೊಡೆದಾಡುವ ದೃಶ್ಯವೊಂದರಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಪ್ರಿಯಾಂಕ ಚೋಪ್ರಾ ಕತ್ತಿನ ಭಾಗಕ್ಕೆ ಸರಿಯಾಗಿ ಹೊಡೆತ ಬಿದ್ದಿದೆ. ಈ ಕುರಿತು ತಮ್ಮ ಈ ಅನುಭವವನ್ನ ಫೋಟೋ ಸಮೇತ ಹಂಚಿಕೊಂಡಿದ್ದಾರೆ. ನಟಿಯ ಅವಸ್ಥೆ ನೋಡಿ ಫ್ಯಾನ್ಸ್ ಚಿಂತೆಗೊಳಗಾಗಿದ್ದಾರೆ.

ಈ ಮೊದಲು ಕೂಡ ಪ್ರಿಯಾಂಕಾ ಚೋಪ್ರಾ ಹಲವು ಬಾರಿ ಶೂಟಿಂಗ್‌ನಲ್ಲಿ ಗಾಯಗೊಂಡಿದ್ದರು. ಆದರೆ ಅವರು ಆ್ಯಕ್ಷನ್ ಸಿನಿಮಾಗಳಿಂದ ದೂರ ಹೋಗಿಲ್ಲ.