
ಕಾರವಾರ – ಲೋಕಸಭಾ ಚುನಾವಣೆಯ ಪ್ರಯುಕ್ತ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮತದಾನ ಪ್ರತಿಜ್ಞಾವಿಧಿ ಭೋಧನೆ ಹಾಗೂ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್ ಕಾಂದೂ ಸಿದ್ದಾಪುರದಲ್ಲಿ ಇಂದು ಚಾಲನೆ ನೀಡಿದರು.
ಜಿಲ್ಲಾ ಹಾಗೂ ಪಂಚಾಯತ್, ಜಿಲ್ಲಾ ಹಾಗೂ ತಾಲೂಕ ಸ್ವೀಪ್ ಸಮಿತಿ ಸಹಯೋಗದಲ್ಲಿ ತಾಲೂಕು ಪಂಚಾಯತ್ ಆವರಣದಿಂದ ಆರಂಭವಾದ ಜಾಥಾವು ಚಂದ್ರಗುತ್ತಿ ಸರ್ಕಲ್ ತಲುಪಿ ಬಸ್ಟ್ಯಾಂಡ್ ಮಾರ್ಗವಾಗಿ ಸುಭಾಷ್ ಚಂದ್ರ ಸರ್ಕಲ್ ಮೂಲಕ ತಾಲೂಕು ಪಂಚಾಯತ್ ತಲುಪಿ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂಬ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಶಿರಸಿ ಉಪ ವಿಭಾಗಾಧಿಕಾರಿ ಅಪರ್ಣ ರಮೇಶ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿಜಯಾ, ತಹಶೀಲ್ದಾರ ವಿಶ್ವಜಿತ್ ಮೆಹತ, ನರೇಗಾ ಸಹಾಯಕ ನಿರ್ದೇಶಕ ವಿದ್ಯಾ ದೇಸಾಯಿ, ತಾ.ಪಂ ಯೋಜನಾಧಿಕಾರಿ ಬಸವರಾಜ್, ತಾಲೂಕ ಪಂಚಾಯತ್ ವ್ಯವಸ್ಥಾಪಕರು ಮೊಹಮ್ಮದ್ ರಿಯಾಜ್, ಸಿಡಿಪಿಒ ಪೂರ್ಣಿಮಾ , ಸಮಾಜ ಕಲ್ಯಾಣಾಧಿಕಾರಿ ಬಸವರಾಜ್, ಕುಡಿಯುವ ನೀರು ಎಇಇ ಸುರೇಶ ರಾಥೋಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಆಯೇಶಾ ಬೇಗಂ, ಚುನಾವಣಾ ರಾಯಭಾರಿ ಗಣಪತಿ ಹೆಗಡೆ ಹುಲಿಮನಿ, ತಾಲೂಕು ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಮಹಿಳೆಯರು ಜಾಥದಲ್ಲಿ ಪಾಲ್ಗೊಂಡಿದ್ದರು.
