Lok Sabha Elections: ಲೋಕಸಭೆ ಚುನಾವಣಾ ದಿನ ದಿನಕ್ಕೂ ರಂಗೇರುತ್ತಿದೆ. ಚುನಾವಣೆಯಲ್ಲಿ ಸೆಣೆಸಾಸುವುದಕ್ಕೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ. ಇವೆಲ್ಲದರ ಮಧ್ಯೆ ಇಂದು ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಇತ್ತ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸುದ್ದಿಗೋಷ್ಠಿ ಮಾಡಿ ಕರ್ನಾಟಕದಲ್ಲಿರುವ ಮತದಾರರ ಅಂಕಿ ಅಂಶಗಳನ್ನು ನೀಡಿದ್ದಾರೆ.
ಬೆಂಗಳೂರು, ಮಾರ್ಚ್ 16 : 2024ರ ಲೋಕಸಭಾ ಚುನಾವಣೆ (Lok Sabha Elections) ವೇಳಾಪಟ್ಟಿ ಪ್ರಕಟ ಹಿನ್ನೆಲೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸುದ್ದಿಗೋಷ್ಠಿ ಮಾಡಿದ್ದು, ಕರ್ನಾಟಕದಲ್ಲಿ ಒಟ್ಟು 5,42,8,088 ಮತದಾರರು ಇದ್ದಾರೆ. 2,71,21,407 ಪುರುಷ ಮತದಾರರು, 2,70,81,748 ಮಹಿಳಾ ಮತದಾರರು ಕರ್ನಾಟಕದಲ್ಲಿ 4,933 ತೃತೀಯ ಲಿಂಗ ಮತದಾರರಿದ್ದಾರೆ. ರಾಜ್ಯದಲ್ಲಿ 18-19 ವರ್ಷದೊಳಗಿನ 11,24,622 ಯುವ ಮತದಾರರಿದ್ದಾರೆ. ರಾಜ್ಯದಲ್ಲಿ 5 ಎಸ್ಸಿ ಮೀಸಲು ಕ್ಷೇತ್ರ, 2 ಎಸ್ಟಿ ಮೀಸಲು ಕ್ಷೇತ್ರಗಳಿವೆ. ಮೂರನೇ ಹಂತದ ಚುನಾವಣೆಯಲ್ಲಿ ಸುರಪುರ ಕ್ಷೇತ್ರದ ಬೈ ಎಲೆಕ್ಷನ್ ನಡೆಯಲ್ಲಿದೆ ಎಂದು ಮಾಹಿತಿ ನೀಡಿದರು.
- ಕರ್ನಾಟಕದಲ್ಲಿ 85 ವರ್ಷ ಮೇಲ್ಪಟ್ಟ 5,70,168 ಮತದಾರರಿದ್ದಾರೆ
- ದಿವ್ಯಾಂಗ ಮತದಾರರು-6,12,154, ಬುಡಕಟ್ಟು ಮತದಾರರು-38,794
- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 31,74,098 ಮತದಾರು.
- ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 15,72,958 ಮತದಾರರು.
- ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 7,33,313 ಮತದಾರರು.
- ಚಿಕ್ಕಮಗಳೂರಿನ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 1,68,084 ಮತದಾರರು.
- ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಒಟ್ಟು ಮತಗಟ್ಟೆಗಳ ಸಂಖ್ಯೆ-58,834
- ಕರ್ನಾಟಕದಲ್ಲಿ ನಗರ ಪ್ರದೇಶಗಳಲ್ಲಿರುವ ಮತಗಟ್ಟೆಗಳ ಸಂಖ್ಯೆ -21,595
- ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಮತಗಟ್ಟೆಗಳ ಸಂಖ್ಯೆ-37,239
ನಮ್ಮ ರಾಜ್ಯದ ಸುತ್ತ ಆರು ರಾಜ್ಯಗಳ ಗಡಿ ಇದೆ. ಹಾಗಾಗಿ ಚೆಕ್ ಪೋಸ್ಟ್ಗಳನ್ನ ರಚಿಸಲಾಗಿದೆ. 29 ಜಿಲ್ಲೆಗಳ ಜೊತೆ ಬಾರ್ಡರ್ ಬರಲಿದೆ. ಎಲ್ಲಾ ಕಡೆ ಚೆಕ್ ಪಾಯಿಂಟ್ ಹಾಕಿದ್ದೇವೆ. ಕಳೆದ ಆರು ತಿಂಗಳಿಂದ ವಿಜಿಲೆನ್ಸ್ ಸ್ಟಾರ್ಟ್ ಮಾಡಿದ್ದೇವೆ.