ಕುಟುಂಬ ರಾಜಕಾರಣದ ಕರಿನೆರಳು ಈ ಬಾರಿಯ ಲೋಕಸಭೆ ಚುನಾವಣೆಯನ್ನೂ ಬಿಟ್ಟಿಲ್ಲ. ಬಿಜೆಪಿ, ಜೆಡಿಎಸ್ ಕಾಂಗ್ರೆಸ್ ಮೂರೂ ಪಕ್ಷಗಳು ಇದಕ್ಕೆ ಹೊರತಾಗಿಲ್ಲ. ಈ ಮಧ್ಯೆ, ಕಾಂಗ್ರೆಸ್ ಪಕ್ಷದಲ್ಲಿ ಯಾವ ನಾಯಕರ ಕುಟುಂಬದವರೆಲ್ಲ ಈ ಬಾರಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ? ಯಾವೆಲ್ಲ ನಾಯಕರು ಕುಟುಂಬದವರಿಗೆ ಟಿಕೆಟ್ ಕೊಡಲು ಯತ್ನಿಸುತ್ತಿದ್ದಾರೆ ಎಂಬ ವಿವರ ಇಲ್ಲಿದೆ.
ಬೆಂಗಳೂರು, ಮಾರ್ಚ್ 15: ಲೋಕಸಭಾ ಚುನಾವಣೆಯಲ್ಲೂ (Lok Sabha Elections) ಕುಟುಂಬ ರಾಜಕಾರಣದ (Dynasty politics) ಕರಿ ನೆರಳು ಕಾಣಿಸಲಾರಂಭಿಸಿದ್ದು, ಕಾರ್ಯಕರ್ತರನ್ನು ಬಿಟ್ಟು ರಾಜಕಾರಣಿಗಳ ಕುಡಿಗಳಿಗೇ ಮಣೆ ಹಾಕಲು ಯತ್ನಿಸಲಾಗುತ್ತಿದೆ. ಕರ್ನಾಟಕದಲ್ಲಿ (Karnataka) ಅನೇಕ ನಾಯಕರು ಕುಟುಂಬಸ್ಥರನ್ನೇ ಕಣಕ್ಕಿಳಿಸಲು ಕಸರತ್ತು ನಡೆಸುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ಗಳಲ್ಲಿ ಕುಟುಂಬದವರಿಗೇ ಮಣೆ ಹಾಕಲಾಗುತ್ತಿದೆ ಎಂಬ ಆರೋಪವಿದೆ. ಈ ಮಧ್ಯೆ, ಕುಟುಂಬದವರನ್ನೇ ಕಣಕ್ಕಿಳಿಸಲು ಯತ್ನಿಸುತ್ತಿರುವ ಕಾಂಗ್ರೆಸ್ ನಾಯಕರ ಮತ್ತು ಅವರ ಕುಟುಂಬದ ಟಿಕೆಟ್ ಆಕಾಂಕ್ಷಿಗಳ ವಿವರ ಇಲ್ಲಿದೆ.
ರಾಜ್ಯದ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ರಾಜಕಾರಣಿಗಳ ಮಕ್ಕಳು, ಮರಿಗಳು ಲೋಕಸಭೆ ಚುನಾವಣೆ ಸ್ಪರ್ಧೆಗೆ ಆಸಕ್ತಿ ಹೊಂದಿದ್ದಾರೆ.
ಕುಟುಂಬ ರಾಜಕಾರಣ: ಟಿಕೆಟ್ ಆಕಾಂಕ್ಷಿಗಳ ವಿವರ
ಸಾಗರ್ ಖಂಡ್ರೆ – ಸಚಿವ ಈಶ್ವರ್ ಖಂಡ್ರೆ ಪುತ್ರ
ಮೃಣಾಲ್ ಹೆಬ್ಬಾಳ್ಕರ್ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ
ಪ್ರಯಾಂಕಾ ಜಾರಕಿಹೊಳಿ – ಸಚಿವ ಸತೀಶ್ ಜಾರಕಿಹೊಳಿ ಪುತ್ರಿ
ಸುನಿಲ್ ಬೋಸ್ – ಸಚಿವ ಎಚ್ಸಿ ಮಹದೇವಪ್ಪ ಪುತ್ರ
ವೀಣಾ ಕಾಶಪ್ಪನವರ್ – ಶಾಸಕ ವಿಜಯಾನಂದ ಪತ್ನಿ
ಸೌಮ್ಯಾ ರೆಡ್ಡಿ – ಸಚಿವ ರಾಮಲಿಂಗ ರೆಡ್ಡಿ ಪುತ್ರಿ
ವಿನಯ್ ತಿಮ್ಮಾಪುರ – ಸಚಿವ ಆರ್ಬಿ ತಿಮ್ಮಾಪುರ ಪುತ್ರ
ಡಾ. ಯತೀಂದ್ರ – ಸಿದ್ದರಾಮಯ್ಯ ಪುತ್ರ
ರಾಧಾಕೃಷ್ಣ – ಮಲ್ಲಿಕಾರ್ಜುನ ಖರ್ಗೆ ಅಳಿಯ
ರಾಜಶೇಖರ್ ಹಿಟ್ನಾಳ್ – ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ
ಶಿವಲೀಲಾ ಕುಲಕರ್ಣಿ – ಶಾಸಕ ವಿನಯ್ ಕುಲಕರ್ಣಿ ಪತ್ನಿ
ಗೀತಾ ಶಿವರಾಜ್ ಕುಮಾರ್ – ಸಚಿವ ಮಧು ಬಂಗಾರಪ್ಪ ಸಹೋದರಿ
ಸಂಯುಕ್ತಾ ಪಾಟೀಲ್ – ಸಚಿವ ಶಿವಾನಂದ ಪಾಟೀಲ್ ಪುತ್ರಿ
ರಜತ್ ಉಳ್ಳಾಗಡ್ಡಿ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂಬಂಧಿ
ಪ್ರಭಾ ಮಲ್ಲಿಕಾರ್ಜುನ – ಸಚಿವ ಎಸ್ಎಸ್ ಮಲ್ಲಿಕಾರ್ಜುನ ಪತ್ನಿ
ನರಸಿಂಹರಾಜು – ಸಚಿವ ಕೆಎಚ್ ಮುನಿಯಪ್ಪ ಪುತ್ರ
ಇಷ್ಟು ಮಂದಿ ಕೂಡ ಲೋಕಸಭೆ ಟಿಕೇಟ್ ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ ಗೀತಾ ಶಿವರಾಜ್ ಕುಮಾರ್ಗೆ ಈಗಾಗಲೇ ಶಿವಮೊಗ್ಗ ಕ್ಷೇತ್ರದಿಂದ ಟಿಕೆಟ್ ಘೋಷಣೆಯಾಗಿದೆ. ಉಳಿದಂತೆ ಇತರ ನಾಯಕರು ಸಹ ಸಂಬಂಧಿಕರು, ಮಕ್ಕಳಿಗೆ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದಾರೆ. ಕುಟುಂಬ ರಾಜಕಾರಣಕ್ಕೆ ನೀರೆರೆಯಲು ರಾಜ್ಯ ಕಾಂಗ್ರೆಸ್ ನಾಯಕರು ಯಾವುದೇ ರೀತಿಯಲ್ಲಿಯೂ ಹಿಂದೇಟು ಹಾಕುತ್ತಿಲ್ಲ ಎಂಬ ಆರೋಪ ಬಲವಾಗಿದೆ.