ಉತ್ತರ ಕನ್ನಡ: ನೌಕಾನಲೆಯ ಲೇಬರ್ ಕಾಲೋನಿಯಲ್ಲಿ ಸಿಲಿಂಡರ್​ ಸ್ಫೋಟ

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದಗಾ ನೌಕಾನೆಲೆಯ ಕಾರ್ಮಿಕರ ಶೆಡ್​​ನಲ್ಲಿ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮನೆಗಳಿಗೆ ಬೆಂಕಿ ತಗುಲಿದೆ. ನೌಕಾನೆಲೆಯ ಲೇಬರ್ ಕಾಲೋನಿಯಲ್ಲಿ 150 ಕ್ಕೂ ಅಧಿಕ ಶೆಡ್​ಗಳಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಶಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಕಾರವಾರ, ಮಾರ್ಚ್​​ 10 : ಉತ್ತರ ಕನ್ನಡ (Uttar Kannada) ಜಿಲ್ಲೆಯ ಕಾರವಾರ (Karwar) ತಾಲೂಕಿನ ಮುದಗಾ ನೌಕಾನೆಲೆಯ (Naval base) ಎನ್‌ಸಿಸಿ ಗುತ್ತಿಗೆ ಕಂಪನಿ ಕಾರ್ಮಿಕರ ಶೆಡ್​​ನಲ್ಲಿ ಅಡುಗೆ ಸಿಲಿಂಡರ್ ಸ್ಫೋಟಗೊಂಡು (Cylinder Blast) ಒಂದು ಸಾಲಿನ ನಾಲ್ಕೈದು ಶೆಡ್‌ಗಳಿಗೆ ಬೆಂಕಿ (Fire) ತಗುಲಿದೆ. ನೌಕಾನೆಲೆಯ ಲೇಬರ್ ಕಾಲೋನಿಯಲ್ಲಿ 150 ಕ್ಕೂ ಅಧಿಕ ಶೆಡ್​ಗಳಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಶಿಬ್ಬಂದಿ ಬೆಂಕಿ ನಂದಿಸಿದ್ದಾರೆ.