ಯಲ್ಲಾಪುರ: ಶೈಕ್ಷಣಿಕ ಮತ್ತು ಇತರೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಮಾತೃಭೂಮಿ ಸೇವಾ ಪ್ರತಿಷ್ಠಾನಕ್ಕೆ ಸಂಸ್ಥೆಯ ಟ್ರಸ್ಟಿ, ಚಾರ್ಟರ್ಡ ಅಕೌಂಟೆಂಟ್ ಜನಾರ್ಧನ ಹೆಬ್ಬಾರ ಒಂದು ಲಕ್ಷ ರೂ ದೇಣಿಗೆ ನೀಡಿದ್ದಾರೆ.
ಮೂಲತಃ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದ ಜನಾರ್ಧನ ಹೆಬ್ಬಾರ ಈ ಹಣದ ಮೇಲೆ ಬಂದ ಬಡ್ಡಿ ಹಣವನ್ನು ಕಳಚೆ ಗ್ರಾಮದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮೀಸಲಿರಿಸಲು ವಿನಂತಿಸಿದ್ದಾರೆ. ಕಳೆದ ವರ್ಷ ಭೀಕರ ಮಳೆ ಮತ್ತು ಕಳಚೆ ಗುಡ್ಡ ಕುಸಿತದಿಂದಾಗಿ ನೂರಾರು ಕುಟುಂಬಗಳು ಅತಂತ್ರವಾಗಿತ್ತು. ಆಗ ಮಾತೃಭೂಮಿ ಸೇವಾ ಪ್ರತಿಷ್ಠಾನ 11 ಲಕ್ಷ ರೂ. ಆರ್ಥಿಕ ಸಹಾಯ ನೀಡಿದ್ದು ಕಳಚೆ ನಿಧಿ ಒಟ್ಟುಗೂಡಿಸುವ ಕೈಂಕರ್ಯದಲ್ಲಿ ಜನಾರ್ಧನ ಹೆಬ್ಬಾರ ಮಹತ್ವದ ಪಾತ್ರ ವಹಿಸಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಶ್ರೀರಂಗ ಕಟ್ಟಿ, ಇನ್ನೋರ್ವ ಟ್ರಸ್ಟಿ ಸಿ.ಎ. ಕಮಲಾಕರ ಭಟ್ಟ ಮತ್ತು ಪದಾಧಿಕಾರಿ ಗಳು ಜನಾರ್ಧನ ಹೆಬ್ಬಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.