ದಾಂಡೇಲಿ : ನಿವೃತ್ತ ಪಿಎಸ್ಐ ಹಾಗೂ ನಗರದ ಬಸವೇಶ್ವರನಗರದ ನಿವಾಸಿ ಎಚ್.ಬಿ.ಕೊಣ್ಣೂರು ಅವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ವಿಧಿವಶರಾದರು. ಮೃತರಿಗೆ 67 ವರ್ಷ ವಯಸ್ಸಾಗಿತ್ತು.
30 ವರ್ಷಗಳಿಗಿಂತಲೂ ಅಧಿಕ ವರ್ಷಗಳ ಕಾಲ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದ ಎಚ್.ಬಿ.ಕೊಣ್ಣೂರು ಅವರು ಕಾರವಾರ ಗ್ರಾಮೀಣ ಠಾಣೆಯ ಸಂಚಾರಿ ವಿಭಾಗದ ಪಿಎಸ್ಐಯಾಗಿ ನಿವೃತ್ತರಾಗಿದ್ದರು.
ಎಚ್.ಬಿ.ಕೊಣ್ಣೂರು ಅವರು ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾ ತಾಲೂಕಿನಲ್ಲಿ ಹೆಚ್ಚು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಸರಳ ಸಹೃದಯಿ ವ್ಯಕ್ತಿತ್ವದ ಎಚ್.ಬಿ.ಕೊಣ್ಣೂರು ಅವರು ತಾಯಿ, ಐವರು ಸಹೋದರರು, ಇಬ್ಬರು ಸಹೋದರಿಯರು, ಪತ್ನಿ ನಾಲ್ವರು ಹೆಣ್ಣು ಮಕ್ಕಳನ್ನು ಮತ್ತು ಓರ್ವ ಪುತ್ರನನ್ನು ಹಾಗೂ ಅಪಾರ ಸಂಖ್ಯೆಯಲ್ಲಿ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ಸಹೋದರ ಪಿ.ಬಿ.ಕೊಣ್ಣೂರು ಅವರು ಪ್ರಸಕ್ತ ಅಂಬಿಕಾನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಮೃತರ ಅಂತ್ಯಕ್ರಿಯೆಯು ಅವರ ಹುಟ್ಟೂರಾದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಬ್ಯಾಕೋಡ ಗ್ರಾಮದಲ್ಲಿ ಜ:27 ರಂದು ನಡೆಯಲಿದೆ.