ರಾಮ ಮಂದಿರ ಉದ್ಘಾಟನೆಯ ದಿನದಂದು ಅಯೋಧ್ಯೆಯ ರಾಜ ಎಂದೇ ಕರೆಯಲ್ಪಡುವ ಹನುಮಂತನ ಅನುಮತಿ ಪಡೆದು ಪ್ರಧಾನಿ ಮೋದಿ ರಾಮಜನ್ಮಭೂಮಿಗೆ ತೆರಳಲಿದ್ದಾರೆ. ಪ್ರಧಾನಿ ಮೋದಿಯವರು ಮೊದಲು ಹನುಮಾನ್ ಘಡಿಯಲ್ಲಿ ಪ್ರತಿಜ್ಞೆ ಮಾಡಿ ದೇಶಕ್ಕೆ ಸಮರ್ಪಿಸಲಿದ್ದಾರೆ. ಇದಾದ ಬಳಿಕ ರಾಮಮಂದಿರದಲ್ಲಿ ಷೋಡಶೋಪಚಾರ ಪೂಜೆ ನಡೆಯಲಿದೆ. ಷೋಡಶೋಪಚಾರ ಪೂಜೆ ಮತ್ತು ಮಹಾಪೂಜೆ ಸೇರಿದಂತೆ ಗರ್ಭಗುಡಿಯಲ್ಲಿ ಒಟ್ಟು 40 ನಿಮಿಷಗಳು ಪೂಜೆ ನಡೆಯಲಿದೆ.
ಅಯೋಧ್ಯೆಯಲ್ಲಿ ಹನುಮಂತ ರಾಜನಾಗಿ ಕುಳಿತಿದ್ದಾನೆ ಎಂಬ ನಂಬಿಕೆಯಿದೆ. ಅವರ ಅನುಮತಿಯಿಲ್ಲದೆ ಅಯೋಧ್ಯೆಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಈ ನಂಬಿಕೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಮೊದಲು ಹನುಮಂತನ ಆಸ್ಥಾನ ಹುಮಾನ್ ಗಢಿಗೆ ತೆರಳಲಿದ್ದಾರೆ. ಅಲ್ಲಿ ವಿಶೇಷವಾದ ಪೂಜೆ ಸಲ್ಲಿಸಿ ಹನುಮಾನ್ ಅವರಿಂದ ವಿಶೇಷ ಅನುಮತಿ ಪಡೆದು ರಾಮಮಂದಿರಕ್ಕೆ ತೆರಳಲಿದ್ದಾರೆ.
ಬಾಲರಾಮನ ಪ್ರಾಣ ಪ್ರತಿಷ್ಠಾ ಮಹೋತ್ಸವದ ಆಚರಣೆಗಳು ಜನವರಿ 16 ರಿಂದ ಪ್ರಾರಂಭವಾಗಲಿವೆ. ಆಚರಣೆಯಲ್ಲಿ, ಪ್ರಧಾನಿ ಮೋದಿ ಮೊದಲು ಪ್ರತಿಜ್ಞೆ ತೆಗೆದುಕೊಂಡು ದೇಶಕ್ಕೆ ಸಮರ್ಪಿಸಲಿದ್ದಾರೆ. ನಂತರ ರಾಮಲಲ್ಲಾ ಷೋಡಶೋಪಚಾರ ಪೂಜೆ ಶುರುವಾಗಲಿವೆ. ಷೋಡಶೋಪಚಾರ ಪೂಜೆ ಮತ್ತು ಮಹಾಪೂಜೆ ಸೇರಿದಂತೆ ರಾಮಮಂದಿರದ ಗರ್ಭಗುಡಿಯಲ್ಲಿ ಒಟ್ಟು 40 ನಿಮಿಷಗಳು ಪೂಜೆ ನಡೆಯಲಿವೆ.
ಜನವರಿ 22 ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾ 84 ಸೆಕೆಂಡುಗಳ ಅತ್ಯಂತ ಪವಿತ್ರ ಮುಹೂರ್ತ ಇರುತ್ತದೆ. ಅದು 12.29 ನಿಮಿಷ 8 ಸೆಕೆಂಡುಗಳಿಂದ 12:30 ನಿಮಿಷ 32 ಸೆಕೆಂಡುಗಳವರೆಗೆ ಇರುತ್ತದೆ. ಪೂಜೆಯ ಸಮಯದಲ್ಲಿ ಗರ್ಭಗುಡಿಯಲ್ಲಿ 11 ಜನರು ಇರಬಹುದಾಗಿದೆ. ಆಚಾರ್ಯ ಲಕ್ಷ್ಮೀಕಾಂತ್ ಮತ್ತು ಗಣೇಶ್ವರ್ ದ್ರಾವಿಡ್ ಅವರ ನೇತೃತ್ವದಲ್ಲಿ ಪೂಜೆ ನಡೆಯಲಿದೆ.
ವಾಲ್ಮೀಕಿ ರಾಮಾಯಣದಲ್ಲಿ ಭಗವಾನ್ ಶ್ರೀರಾಮರು ಸಾಕೇತ್ ಧಾಮಕ್ಕೆ ಹೋಗಲು ಪ್ರಾರಂಭಿಸಿದಾಗ, ಅದಕ್ಕೂ ಮೊದಲು ಅವರು ಹನುಮಾನ್ ಅವರಿಗೆ ಪಟ್ಟಾಭಿಷೇಕವನ್ನು ಮಾಡಿದ್ದರು ಎಂದು ಉಲ್ಲೇಖಿಸಲಾಗಿದೆ. ಹನುಮಾನ್ ಅವರ ಅನುಮತಿಯನ್ನು ಪಡೆಯದೆ, ರಾಮನ ದರ್ಶನ ಮತ್ತು ಪೂಜೆಯ ಪ್ರಯೋಜನವನ್ನು ಪಡೆಯಲಾಗುವುದಿಲ್ಲ. ತಾಯಿ ಸೀತೆಯೂ ಹನುಮಾನರಿಗೆ ಅಮರತ್ವವನ್ನು ದಯಪಾಲಿಸಿದ್ದರು. ಈ ಕಾರಣಕ್ಕಾಗಿಯೇ ರಾಮಮಂದಿರ ದರ್ಶನಕ್ಕೂ ಮೊದಲು ಹನುಮಾನ್ ಗಢಿ ಯಲ್ಲಿ ದರ್ಶನ ಪಡೆದು ರಾಮಮಂದಿರಕ್ಕೆ ತೆರಳುವ ಪ್ರತಿತಿ ಇದೆ.
ಇನ್ನು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ 8 ರಿಂದ 10 ಸಾವಿರ ಅತಿಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸುಮಾರು 100 ಚಾರ್ಟರ್ಡ್ ವಿಮಾನಗಳ ಮೂಲಕ ಅತಿಥಿಗಳು ಆಗಮಿಸುತ್ತಾರೆ. ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ವಿಶೇಷ ಗುರುತಿನ ಚೀಟಿ ನೀಡುವ ವ್ಯವಸ್ಥೆ ಮಾಡಲಾಗಿದೆ.