ಕಲಬುರಗಿ ನ.22: ಕೆಇಎ ನಡೆಸಿದ ಎಫ್ಡಿಎ ನೇಮಕಾತಿ ಪರೀಕ್ಷಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಆರ್ಡಿ ಪಾಟೀಲ್ನನ್ನು ಬಂಧಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದರು ಎಂಬ ಆರೋಪದ ಮೇಲೆ ಅಫಜಲಪುರದ ಸಿಪಿಐ ಪಂಡಿತ ಸಗರ ಅವರನ್ನು ಅಮಾನತು ಮಾಡಲಾಗಿದೆ. ನವೆಂಬರ್ 6ರಂದು ಪ್ರಕರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ನನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ ಆರ್ಡಿ ಪಾಟೀಲ್ ತಾನು ಇದ್ದ ವಸತಿ ಸಮುಚ್ಚಯದಿಂದ ಪರಾರಿಯಾಗಿದ್ದನು. ಹೀಗಾಗಿ ಪೊಲೀಸರು ಸರಿಯಾದ ಪ್ಲ್ಯಾನ್ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಸಿಪಿಐ ಪಂಡಿತ ಸಗರ ಅವರನ್ನು ಅಮಾನತು ಮಾಡಿ ಐಜಿಪಿ ಆದೇಶ ಹೊರಡಿಸಿದ್ದಾರೆ.